ಉಡುಪಿ: ನಗರದ ಬೈಲೂರು ಬಳಿ ಬಾವಿಗೆ ಬಿದ್ದಿದ್ದ ಗರ್ಭಿಣಿ ಹಸುವನ್ನು ಅಗ್ನಿಶಾಮಕ ದಳ ರಕ್ಷಿಸಿದೆ.ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಗರ್ಭಿಣಿ ಹಸು ಬಿದ್ದು, ಮೇಲೆ ಬರಲಾಗದೆ ಒದ್ದಾಟ ನಡೆಸುತ್ತಿತ್ತು.
ಈ ಹಸುವನ್ನು ಸ್ಥಳೀಯರು ಮೇಲೆತ್ತಲು ಮಾಡಿದ ಹರಸಾಹಸ ವಿಫಲವಾಯಿತು. ನಂತರ, ಘಟನಾ ಸ್ಥಳಕ್ಕೆ ಧಾವಿಸಿದ ಉಡುಪಿ ಅಗ್ನಿಶಾಮಕ ದಳ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆಗೆ ಇಳಿದು ಹಸುವನ್ನು ರಕ್ಷಿಸಿದರು. ಗರ್ಭಿಣಿ ಹಸುವನ್ನು ಕಾಪಾಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗ್ನಿಶಾಮಕ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.
Kshetra Samachara
07/02/2021 09:30 pm