ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜಿಲ್ಲೆಯಲ್ಲಿ ಸ್ಯಾಕ್ಸೋಫೋನ್ ಮೂಲಕ ತನ್ನ ಪ್ರತಿಭೆಯನ್ನು ಹೊರ ಹಾಕಿದ 7 ವರ್ಷದ ಪೋರ.

ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ಏಳು ವರ್ಷದ ಪೋರನ ಸಾಧನೆ ಇದೀಗ ಮೈನವಿರೇಳಿಸುವಂತೆ ಕಾಣುತ್ತಿದೆ. 2ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹುಡುಗ ಇದೀಗ ಸ್ಯಾಕ್ಸೋಫೋನ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಭೌಗೋಳಿಕವಾಗಿ ಸುಂದರವಾಗಿರುವ ಕ್ಷೇತ್ರ ಬೈಂದೂರು ಬೈಂದೂರು ಕ್ಷೇತ್ರದಲ್ಲಿ ಭಿನ್ನ ವಿಭಿನ್ನತೆಯ ಸಾಂಸ್ಕೃತಿಕ ಕಲೆಯಲ್ಲಿ ಕಲಾವಿದರು ತಮ್ಮನ್ನು ತಾವು ತೊಡಗಿಸಿಕೊಂಡು ಜೀವನವನ್ನ ರೂಪಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಗಂಗೊಳ್ಳಿಯ ಏಳು ವರ್ಷದ ಪೋರನಾ ಸಾಧನೆ ಕೂಡ ಅಪಾರ ಜನಮನ್ನಣೆ ಗಳಿಸಿದೆ.

ಗಂಗೊಳ್ಳಿಯ ಮಾಧವ ಮತ್ತು ಸಾವಿತ್ರಿ ಅವರ ಪುತ್ರ ಸಂಜಿತ್ ದೇವಾಡಿಗ ಕರಾವಳಿಯಲ್ಲಿ 35 ಸ್ವರಗಳನ್ನು ನುಡಿಸುವುದರ ಮೂಲಕ ಸ್ಯಾಕ್ಸೋಫೋನ್ ನಲ್ಲಿ ದಾಖಲೆ ಸೃಷ್ಟಿಸುವ ಹೆಜ್ಜೆಯನ್ನಿಟ್ಟಿದ್ದಾರೆ. ತಂದೆ ತಾಯಿ ಇಬ್ಬರು ಸ್ಯಾಕ್ಸೋಫೋನ್ ಕಲಾವಿದರಾಗಿದ್ದು ತಂದೆ-ತಾಯಿ ಪ್ರತಿನಿತ್ಯ ಪ್ರಾಕ್ಟೀಸ್ ಮಾಡುತ್ತಿರುವುದನ್ನು ಗಮನಿಸುತ್ತಿದ್ದಾ ಹುಡುಗ ಅದರಲ್ಲಿ ಆಸಕ್ತಿ ಬೆಳೆಸಿಕೊಂಡು ಇದೀಗ ಸ್ವತಃ ತಾನೇ 35 ಸ್ವರಗಳನ್ನು ಅಭ್ಯಾಸ ಮಾಡಿ ನುಡಿಸುವಲ್ಲಿ ತನ್ನ ಸಾಮರ್ಥ್ಯವನ್ನು ಮೆರೆದಿದ್ದಾನೆ. ಅತಿ ಚಿಕ್ಕ ವಯಸ್ಸಿನಲ್ಲಿ ಸ್ಯಾಕ್ಸೋಫೋನ್ ನುಡಿಸುವುದು ಅಷ್ಟು ಸುಲಭದ ಕೆಲಸವಲ್ಲ ಆದರೂ ತಂದೆ ಮತ್ತು ತಾಯಿಯ ಮಾರ್ಗದರ್ಶನದ ಮೇರೆಗೆ ಯುವಕ ಸಾಧನೆಯ ಒಂದು ಹೆಜ್ಜೆಯನ್ನು ಮುಂದೆ ಇಟ್ಟಿದ್ದಾರೆ.ಕರೋನಾ ಲಾಕ್ ಡೌನ್ ನಲ್ಲಿ ಸ್ವಲ್ಪ ಸಮಯ ಸಿಕ್ಕ ಕಾರಣ ಇನ್ನಷ್ಟು ಇದರಲ್ಲಿ ತಾನು ಪರಿಣಿತನಾಗಿ ಯುವಕ ಅಭ್ಯಾಸ ಮಾಡಿಕೊಂಡು ಇದೀಗ ಸಾರಾಸಗಟಾಗಿ ಸ್ಯಾಕ್ಸೋಫೋನ್ ನುಡಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾನೆ.

ಈತ ಸ್ಯಾಕ್ಸೋಫೋನ್ ಮೂಲಕ ಗಿನ್ನಿಸ್ ಬಾಗಿಲು ತಟ್ಟಬೇಕು ಎನ್ನುವುದು ತಂದೆ-ತಾಯಿಯ ಕನಸಾಗಿತ್ತು ಇನ್ನಷ್ಟು ಹೊಸ ಸ್ವರಗಳನ್ನು ಕಲಿಯುವಲ್ಲಿ ಈ ಪುಟ್ಟ ಯುವಕ ಹೆಜ್ಜೆ ಇಡುತ್ತಿದ್ದಾನೆ.

ಸಂದೇಶ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ.

Edited By : Manjunath H D
Kshetra Samachara

Kshetra Samachara

04/02/2021 04:45 pm

Cinque Terre

25.65 K

Cinque Terre

4

ಸಂಬಂಧಿತ ಸುದ್ದಿ