ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ತಾಯಿಯನ್ನೇ ಬೀದಿಗೆ ತಳ್ಳಿದ ಪಾಪಿಗಳು- ಐದು ಮಕ್ಕಳಿದ್ದರೂ ವೃದ್ಧೆ ಈಗ ಅನಾಥೆ..!

ಬೆಳ್ತಂಗಡಿ: ನಮ್ಮನ್ನು ಹೆತ್ತು, ಹೊತ್ತು, ಕಲಿಸಿ, ಬೆಳೆಸಿದ ತಾಯಿಗೆ ನಾವು ಸದಾ ಋಣಿಯಾಗಿದ್ದೇವೆ. ಅಂತಹ ಮಾತೃ ದೇವತೆಯನ್ನೇ ಪಾಪಿ ಮಕ್ಕಳು ಬೀದಿಯಲ್ಲಿ ಬಿಟ್ಟ ಅಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ನಡೆದಿದೆ.

ಮೂಲತಃ ಕಳಿಯ ಗ್ರಾಮದ ಜನತಾ ಕಾಲೋನಿ ನಿವಾಸಿಯಾದ ವೃದ್ಧೆಯೊಬ್ಬರಿಗೆ ಐವರು ಮಕ್ಕಳಿದ್ದರೂ ಅನಾಥ ಪರಿಸ್ಥಿತಿ ಎದುರಾಗಿದೆ. ವೃದ್ಧೆಯನ್ನು ಅವರ ಮನೆಯವರೇ ನ್ಯಾಯತರ್ಪು ಗ್ರಾಮದ ನಾಳದಲ್ಲಿ ರಸ್ತೆ ಬದಿ ಬಿಟ್ಟು ಹೋಗಿದ್ದಾರೆ. ಅವರಿಗೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದು, ಎಲ್ಲರಿಗೂ ವಿವಾಹವಾಗಿದೆ.

ವೃದ್ಧೆ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಆರೈಕೆ ಮಾಡುವವರು ಯಾರು ಎಂಬ ವಿಚಾರಕ್ಕೆ ಮಕ್ಕಳು ಕಿತ್ತಾಡಿಕೊಂಡಿದ್ದಾರೆ. ಕೊನೆಗೆ ತಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸ್ಥಳೀಯರೊಬ್ಬರು ದಕ್ಷಿಣ ಕನ್ನಡ ಜಿಲ್ಲಾ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣವೇ ತುರ್ತು ಸ್ಪಂದನಾ ವಾಹನ ಸ್ಥಳಕ್ಕೆ ದೌಡಾಯಿಸಿ ವೃದ್ಧೆಯನ್ನು ಅವರ ಪುತ್ರಿಯ ಮನೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಸೂಕ್ತ ಮಾಹಿತಿ ನೀಡಿದ್ದಾರೆ. ಅಮಾನವೀಯವಾಗಿ ನಡೆದುಕೊಂಡ ಮಕ್ಕಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ.

Edited By : Vijay Kumar
Kshetra Samachara

Kshetra Samachara

03/02/2021 01:14 pm

Cinque Terre

11.52 K

Cinque Terre

1

ಸಂಬಂಧಿತ ಸುದ್ದಿ