ಕೋಟ: ವಡ್ಡರ್ಸೆ ಗ್ರಾಪಂ ವ್ಯಾಪ್ತಿಯ ಕೊತ್ತಾಡಿ ಭಾಗದಲ್ಲಿ ಬುಧವಾರ ಕಾಣಿಸಿಕೊಂಡ ಗೋರಿಲ್ಲಾ ಪ್ರಕರಣಕ್ಕೆ ಸಂಬಂಧಿಸಿ ಇಂದು ಬ್ರಹ್ಮಾವರ ಅರಣ್ಯ ಇಲಾಖೆ ಅಧಿಕಾರಿ ಹರೀಶ್ ನೇತೃತ್ವದಲ್ಲಿ ಶೋಧ ನಡೆಯಿತು.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಗೋರಿಲ್ಲಾ ಹೆಜ್ಜೆ ಗುರುತು ಕಾಣಿಸಿದ್ದು, ಸುಮಾರು ಎಂಟು ಎಕರೆ ವಿಸ್ತೀರ್ಣದ ಕಾಡು ಪ್ರದೇಶದಲ್ಲಿ ಶೋಧ ಕಾರ್ಯದಲ್ಲಿ ಪ್ರತ್ಯಕ್ಷದರ್ಶಿ ಗುರುರಾಜ್, ಪ್ರಜ್ವಲ್ ಮತ್ತು ಸ್ಥಳೀಯರ ಸಹಕಾರ ಪಡೆದು ಹುಡುಕಾಟ ನಡೆದರೂ ಎಲ್ಲಿಯೂ ಗೋರಿಲ್ಲಾ ಸುಳಿವು ಲಭ್ಯವಾಗಲಿಲ್ಲ.
ಗೋರಿಲ್ಲಾ ವಿಚಾರಕ್ಕೆ ಸಂಬಂಧಿಸಿ ಸ್ಥಳೀಯರಿಗೆ ಅರಣ್ಯಾಧಿಕಾರಿ ಹರೀಶ್ ಕಿವಿಮಾತು ಹೇಳಿದ್ದಾರೆ. "ಮಕ್ಕಳನ್ನು ಯಾರೂ ಕೂಡ ಹೊರಗೆ ಒಬ್ಬಂಟಿಯಾಗಿ ತಿರುಗಾಡಲು ಬಿಡಬೇಡಿ. ಇಂದು ಇಲ್ಲಿ ನಡೆಯುವ ಯಕ್ಷಗಾನ ಕಾರ್ಯಕ್ರಮಕ್ಕೆ ಬರುವವರು ಜಾಗೃತೆ ವಹಿಸಿ, ಗೋರಿಲ್ಲಾ ಬಗ್ಗೆ ಸುಳಿವು ಲಭ್ಯವಾದರೆ ಕೂಡಲೇ ನಮಗೆ ತಿಳಿಸಿ" ಎಂದು ಸೂಚನೆ ನೀಡಿದ್ದಾರೆ.
ಒಂದು ಗಂಟೆಗೂ ಅಧಿಕ ಸಮಯ ಅರಣ್ಯ ಇಲಾಖೆ ಅಧಿಕಾರಿಗಳು ಕಾಡು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದರು.
Kshetra Samachara
07/01/2021 10:24 pm