ಮುಲ್ಕಿ: ಮುಲ್ಕಿ ಸಮೀಪದ ಕೊಲಕಾಡಿ ಕೆಪಿಎಸ್ ಕೆ ಪ್ರೌಢಶಾಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ನಾಗಭೂಷಣ ರಾವ್ ಅವರಿಗೆ ಬೀಳ್ಕೊಡುಗೆ ಕೊಲಕಾಡಿ ಕೆಪಿಎಸ್ ಕೆ ಶಾಲೆಯಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಶಾಲೆ ಸಂಚಾಲಕ ಗಂಗಾಧರ ಶೆಟ್ಟಿ ಬರ್ಕೆ ತೋಟ ವಹಿಸಿ ಮಾತನಾಡಿ, ಹಲವು ವರ್ಷಗಳಿಂದ ಶಾಲಾ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ನಾಗಭೂಷಣರಾವ್ ಅವರು ಶಾಲೆ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ವ್ಯಕ್ತಿಯಾಗಿದ್ದು, ಸಾವಿರಾರು ಮಕ್ಕಳ ಮನಸ್ಸನ್ನು ಆಕರ್ಷಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.
ಶಾಲಾ ವಿದ್ಯಾ ಪ್ರಚಾರಿಣಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಮಾತನಾಡಿ, ಶಾಲೆಗಾಗಿ ಹಗಲು ರಾತ್ರಿ ಸ್ವಾರ್ಥ ರಹಿತವಾಗಿ ದುಡಿದ ಸಾಧಕ ಎಂದರು.
ಮುಖ್ಯ ಅತಿಥಿಗಳಾಗಿ ಪ್ರಾ. ಶಾಲಾ ಮುಖ್ಯ ಶಿಕ್ಷಕ ಅಂಬರೀಶ್ ಲಮಾಣಿ, ಸಂಘದ ಸದಸ್ಯರಾದ ಮನೋಹರ ಕೋಟ್ಯಾನ್, ನಿತಿನ್ ಶೆಟ್ಟಿ ಪಂಜಿನಡ್ಕ, ಅನಿಲ್ ಕೊಲಕಾಡಿ, ಹರೀಶ್ ಶೆಟ್ಟಿ ಶಿಮಂತೂರು,ನಿತಿನ್ ಪ್ರಕಾಶ್ ಮುಲ್ಕಿ, ದಿನೇಶ್ಚಂದ್ರ ಅಜಿಲ ಪಂಜಿನಡ್ಕ, ಗಿರಿಧರ ಕಾಮತ್ ಕೆದುಬರಿ, ಅಚ್ಚುತ ಮಾಸ್ಟರ್ ಕೊಲಕಾಡಿ, ಕೃಷಿಕ ಹರೀಶ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕರಾದ ಗ್ರೆಟ್ಟಾ ರೊಡ್ರಿಗಸ್, ಶಿಕ್ಷಕರಾದ ನೋಣಯ್ಯ ರೆಂಜಾಳ, ಚಂದ್ರಶೇಖರ ರಾಠೋಡ, ವೆಂಕಟರಮಣ ಕಾಮತ್, ಅರ್ಪಣಾ, ಪ್ರೀತಿ, ಸಿಬ್ಬಂದಿ ವಾಮನ, ರಾಮಣ್ಣ ನಾಯ್ಕ,ಶ್ರೀಮಂತ ಕಾಮತ್, ಸಂದೀಪ್ ಬಲೆಪು ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಶಾಲಾ ಶಿಕ್ಷಕ ವೃಂದ ಹಾಗೂ ಶಾಲಾ ವಿದ್ಯಾ ಪ್ರಚಾರಿಣಿ ಸಂಘದ ವತಿಯಿಂದ ನಾಗಭೂಷಣ್ ರಾವ್ ಅವರಿಗೆ ಬೀಳ್ಕೊಡುಗೆ ನಡೆಯಿತು. ಪ್ರಸಿದ್ಧ ಕಲಾಕಾರ ಹಾಗೂ ಶಿಕ್ಷಕ ವೆಂಕಿ ಪಲಿಮಾರ್ ಅವರು ವಿವೇಕಾನಂದರ ಪುತ್ಥಳಿ ನೀಡಿ ವಿಶೇಷವಾಗಿ ಗೌರವಿಸಿದರು. ವಿದ್ಯಾ ಪ್ರಚಾರಿಣಿ ಸಂಘದ ಜೊತೆ ಕಾರ್ಯದರ್ಶಿ ಮನೋಹರ ಕೋಟ್ಯಾನ್ ನಿರೂಪಿಸಿದರು.
Kshetra Samachara
30/09/2020 10:05 pm