ಕುಂದಾಪುರ: ಕುಂದಾಪುರ ತಾಲೂಕು ಹೆಂಗವಳ್ಳಿ ಗ್ರಾಮದ ಬಾಬಣ್ಣ ಪೂಜಾರಿಯವರ ಮಗಳು ತನುಶ್ರೀ ಎಂಬ ಪುಟ್ಟ ಬಾಲಕಿ ಥಲಸೇಮಿಯ ಎಂಬ ಕಾಯಿಲೆಗೆ ತುತ್ತಾಗಿದ್ದಳು. ಆದರೆ, ಅವರದು ಬಡ ಕುಟುಂಬ. ಬಾಲಕಿಯ ಚಿಕಿತ್ಸೆಗೆ ಸಹಾಯ ಮಾಡಿ ಎಂದು ಸಾಮಾಜಿಕ ಜಾಲ ತಾಣದಲ್ಲಿ ಕೋರಲಾಗಿತ್ತು.
ಇದನ್ನು ಗಮನಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಅನ್ಸರ್ ಅಹಮ್ಮದ್ ಅವರು, ಮಗುವಿಗೆ ಸಹಾಯ ಮಾಡಲು ಮುಂದಾಗಿ ಮಾನವೀಯತೆ ಮೆರೆದಿದ್ದಾರೆ.
ಬಾಲಕಿಯ ಚಿಕಿತ್ಸೆಗೆ 18 ರಿಂದ 20 ಲಕ್ಷ ರೂ. ಅವಶ್ಯಕತೆ ಇರುವುದರಿಂದ ಕುಟುಂಬ, ದಾನಿಗಳ ಸಹಾಯಕ್ಕೆ ಮನವಿ ಮಾಡಿತ್ತು.
ಶಸ್ತ್ರಚಿಕಿತ್ಸೆ ಆಗುವವರೆಗೂ ಪ್ರತೀ 20 ದಿನಗಳಿಗೊಮ್ಮೆಬಾಲಕಿಗೆ ಡಯಾಲಿಸಿಸ್ ಮಾಡಬೇಕಿದೆ. ಪೋಷಕರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಬಾಲಕಿಯ ಶಸ್ತ್ರ ಚಿಕಿತ್ಸೆಗಾಗಿ 25,000 ರೂ. ಅನ್ಸರ್ ಅಹಮ್ಮದ್ ನೀಡಿದರು.
ಅಲ್ಲದೆ, ಬಾಲಕಿಯ ಚಿಕಿತ್ಸೆಗಾಗಿ ಹಣ ಸಂಗ್ರಹಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿರ್ಧಾರಕ್ಕೆ ಅವರು ಬಂದಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
Kshetra Samachara
19/09/2020 03:58 pm