ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಮರುಜೀವ ಪಡೆದ ಗ್ರಾಮೀಣ ಸಂತೆಗಳು

ಕಲಘಟಗಿ : ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ಸಂತೆಯನ್ನು ಮತ್ತೆ ಪ್ರಾರಂಭಿಸಲಾಗಿದ್ದು,ಗ್ರಾಮೀಣ ಸಂತೆಗಳಿಗೆ ಮರುಜೀವ ಬಂದಂತಾಗಿದೆ.

ಕೊರೊನಾ ಲಾಕ್ ಡೌನ್ ನಿಂದ ರದ್ದಾಗಿದ್ದ ಸಂತೆಗಳು ಅನ್ ಲಾಕ್ ಪ್ರಕ್ರಿಯೆಯಿಂದಾಗಿ ರವಿವಾರ ವಾರದ ಸಂತೆ ಮತ್ತೆ ಪುನರಾರಂಭವಾಗಿದೆ.

ಇದರಿಂದ ರೈತಾಪಿ ಜನರಿಗೆ ಹಾಗೂ ಸಣ್ಣ ಸಣ್ಣ ವ್ಯಾಪಾರಿಗಳಿಗೆ ಅನಕೂಲವಾಗಿದೆ. ಗಂಜಿಗಟ್ಟಿ, ಸುತಗಟ್ಡಿ, ಸೋಲಾರಗೊಪ್ಪ, ಬಗಡಗೇರಿ,ನಾಗನೂರ,ಸುರಶಟ್ಟಿಕೊಪ್ಪ,ದ್ಯಾಮಾಪೂರ,ಬೊಗೆನಾರಕೊಪ, ಬಸವೇಶ್ವರ ನಗರ ಗ್ರಾಮಗಳ ಜನರು ಸಂತೆಗೆ ಆಗಮಿಸಿದರು.

ಗ್ರಾಮದಲ್ಲಿ ಸಂತೆ ನಡೆಯುವುದರಿಂದ ಸುತ್ತಲಿನ ಹಲವು ಗ್ರಾಮಗಳ ಜನರಿಗೆ ಬಹಳಷ್ಟು ಉಪಯೋಗವಾಗಲಿದೆ.

Edited By :
Kshetra Samachara

Kshetra Samachara

20/09/2020 10:16 pm

Cinque Terre

7.03 K

Cinque Terre

0

ಸಂಬಂಧಿತ ಸುದ್ದಿ