ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ.
ಬೈಂದೂರು ತಾಲೂಕಿನ ನಾವುಂದ ಸಾಲ್ಬುಡ ಮುಂತಾದ ನೆರೆ ಪೀಡಿತ ಪ್ರದೇಶಗಳಿಗೆ ಇಂದು
ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಡಿ.ಸಿ. ಕೂರ್ಮಾರಾವ್, ಸಿಇಒ ಪ್ರಸನ್ನ ಕುಮಾರ್, ಎಸಿ ರಾಜು ಭೇಟಿ ನೀಡಿದರು.
ನೆರೆ ಪೀಡಿತ ಪ್ರದೇಶದ ಮನೆಗಳಿಗೆ ದಿನಸಿ ಹಂಚಿಕೆ ಮಾಡಿದ ಅವರು, ಸುಮಾರು ನೂರಕ್ಕೂ ಹೆಚ್ಚು ಮನೆಗಳಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಿದರು.
ಈ ವೇಳೆ ಮಾತನಾಡಿದ
ಶಾಸಕ ಸುಕುಮಾರ ಶೆಟ್ಟಿ,
ಮನೆಯಲ್ಲಿ ವೃದ್ಧರು- ಮಕ್ಕಳು ನಾಲ್ಕು ದಿನಗಳಿಂದ ಹೊರಬರದ ಸ್ಥಿತಿಯಲ್ಲಿದ್ದಾರೆ. ಈ ಭಾಗಕ್ಕೆ ದೋಣಿ, ಲೈಫ್ ಜಾಕೆಟ್ ಗಳನ್ನು ಪೂರೈಕೆ ಮಾಡಲಾಗಿದೆ. ಜನರು ಆತಂಕ ಪಡುವ ಅಗತ್ಯ ಇಲ್ಲ. ನೆರೆಯ ಮಟ್ಟ ಬಹಳಷ್ಟು ಇಳಿಕೆ ಆಗುತ್ತಿದೆ.
ಭತ್ತದ ಬೆಳೆ ನಾಶ ಆಗಿದ್ದಕ್ಕೆ ಸೂಕ್ತ ಪರಿಹಾರ ಕೊಡಲಾಗುವುದು ಎಂದು ಭರವಸೆ ನೀಡಿದರು.
Kshetra Samachara
10/07/2022 05:52 pm