ಉಡುಪಿ: ರಾಜ್ಯಾದ್ಯಂತ ಕೆಎಸ್ ಆರ್ ಟಿಸಿ ನೌಕರರ ಮುಷ್ಕರದ ಅಂಗವಾಗಿ ಉಡುಪಿಯಲ್ಲಿ ನೌಕರನೊಬ್ಬ ವಿಶಿಷ್ಟ ರೀತಿ ಪ್ರತಿಭಟನೆ ನಡೆಸಿ ಗಮನ ಸೆಳೆದರು.
ಉಡುಪಿಯಲ್ಲಿ ಮೆಕ್ಯಾನಿಕ್ ಓರ್ವರು ದೀಡ್ ನಮಸ್ಕಾರ ಹಾಕಿ ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು. ಉಡುಪಿಯ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಿಂದ ಹೊರಟ ಈ ಮೆಕ್ಯಾನಿಕ್, ಶ್ರೀ ಕೃಷ್ಣ ಮಠದವರಿಗೆ ದೀರ್ಘದಂಡ ನಮಸ್ಕಾರ ಹಾಕುತ್ತಾ ಸಾರಿಗೆ ನೌಕರರ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸಿದರು.
ಉಡುಪಿಯ ಕೆಎಸ್ ಆರ್ ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿರುವ ನಾಗೇಶ್ ಬೋವಿ ಅವರು ಈ ರೀತಿ ಪ್ರತಿಭಟನೆ ಮಾಡಿ ಗಮನ ಸೆಳೆದವರು. ಉಡುಪಿ ನಗರ ಠಾಣೆಯಿಂದ ಪ್ರತಿಭಟನೆಗೆ ಅವಕಾಶ ಸಿಗದ ಕಾರಣ, ನಾಗೇಶ್ ಬೋವಿ ಅವರು ದೀಡ್ ನಮಸ್ಕಾರದ ಮೂಲಕ ಪ್ರತಿಭಟನೆ ದಾಖಲಿಸಿದರು.
Kshetra Samachara
13/12/2020 10:47 am