ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೊಲ್ನಾಡು ಗುಡ್ಡೆಯಲ್ಲಿ ಕೂಲಿಕಾರ್ಮಿಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ನಾಡು ಗುಡ್ಡೆ ಹಾಡಿಯಲ್ಲಿ ಕೂಲಿಕಾರ್ಮಿಕ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ವ್ಯಕ್ತಿಯನ್ನು ಮುಲ್ಕಿ ಕೆಎಸ್ ರಾವ್ ನಗರ ನಿವಾಸಿ ಕೃಷ್ಣ ಪೂಜಾರಿ (58) ಗುರುತಿಸಲಾಗಿದೆ. ಮೃತ ಕೃಷ್ಣ ಪೂಜಾರಿ ಕೂಲಿ ಕೆಲಸ ಮಾಡಿಕೊಂಡಿದ್ದು, ಕಳೆದ ತಿಂಗಳ ಹಿಂದೆ ಕೋಲ್ನಾಡು ಹೋಯಿಗೆ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದು ಬಳಿಕ ಫ್ಯಾಕ್ಟರಿ ಮುಚ್ಚುಗಡೆಯಾದ ಬಳಿಕ ಪೈಪ್ ಕಂಪನಿಯೊಂದರಲ್ಲಿ ಮಾಡುತ್ತಿದ್ದರು.

ಕಂಪನಿ ಮುಚ್ಚುಗಡೆಯಾದ ಬಳಿಕ ಆತಂಕಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By :
Kshetra Samachara

Kshetra Samachara

09/12/2020 05:46 pm

Cinque Terre

31.05 K

Cinque Terre

0

ಸಂಬಂಧಿತ ಸುದ್ದಿ