ಮುಲ್ಕಿ: ವಿಜಯಾ ಕಲಾವಿದರು ಕಿನ್ನಿಗೋಳಿ ವತಿಯಿಂದ ಕಲಾವಿದರ ಕುಟುಂಬದ ಸಾಧಕರ ಸನ್ಮಾನ ಮತ್ತು ಹರೀಶ್ ಪಡುಬಿದ್ರಿ ಅವರ ನೂತನ ನಾಟಕ "ಊರುಗ್ ಬರೊಡ್ಚಿ" ನೂತನ ನಾಟಕದ ಮುಹೂರ್ತ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಮನೆಯಲ್ಲಿ ನಡೆಯಿತು.
ಶ್ರೀ ಕಟೀಲು ಕ್ಷೇತ್ರದ ಆರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಐಕಳ ಹರೀಶ್ ಶೆಟ್ಟಿ ವಹಿಸಿ ಮಾತನಾಡಿ, ಕೊರೊನಾ ದಿನಗಳಲ್ಲಿ ಕಲಾವಿದರು ತೀವ್ರ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದು, ನೂತನ ನಾಟಕದ ಮುಹೂರ್ತದ ಮೂಲಕ ಕಲಾವಿದರ ಬದುಕು ಹಸನಾಗಲಿ ಹಾಗೂ ಸಾಧಕ ಕಲಾವಿದರಿಗೆ ಗೌರವ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಕಲೆಗೆ ಪ್ರೋತ್ಸಾಹ ನೀಡುತ್ತಿರುವ ವಿಜಯಾ ಕಲಾವಿದರು ಸಂಘಟನೆ ಕಾರ್ಯವೈಖರಿ ಶ್ಲಾಘನೀಯ ಎಂದರು.
ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ದೆ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುಲ್ಕಿ ಸುವರ್ಣ, ಚಂದ್ರಿಕಾ ಹರೀಶ್ ಶೆಟ್ಟಿ,ಮುಲ್ಕಿ ವಲಯ ಪತ್ರಕರ್ತರ ಸಂಘ ಅಧ್ಯಕ್ಷ ನಿಶಾಂತ್ ಶೆಟ್ಟಿ ಕಿಲೆಂಜೂರು, ಯಕ್ಷಲಹರಿ ಕಿನ್ನಿಗೋಳಿ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ, ಕಲಾವಿದ ರಾಜೇಶ್ ಕೆಂಚನಕೆರೆ, ವಿಜಯ ಕಲಾವಿದರು ಕಿನ್ನಿಗೋಳಿ ಗೌರವಾಧ್ಯಕ್ಷ ಸ್ವರಾಜ್ ಶೆಟ್ಟಿ, ಅಧ್ಯಕ್ಷ ಶರತ್ ಶೆಟ್ಟಿ, ಸಂಚಾಲಕ ಸಾಯಿನಾಥ ಶೆಟ್ಟಿ ಮುಂಡ್ಕೂರು, ನಾಟಕ ರಚನೆಕಾರ ಹರೀಶ್ ಪಡುಬಿದ್ರಿ ಉಪಸ್ಥಿತರಿದ್ದರು.
ಈ ಸಂದರ್ಭ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ ಕಿನ್ನಿಗೋಳಿ, ತುಳು ಅಕಾಡೆಮಿ ಸದಸ್ಯ ನರೇಂದ್ರ ಕೆರೆಕಾಡು, ಕೃಷಿಕ ಸುಧಾಕರ ಸಾಲ್ಯಾನ್ ಏಳಿಂಜೆ ಅವರನ್ನು ಗೌರವಿಸಲಾಯಿತು. ಶರತ್ ಶೆಟ್ಟಿ ನಿರೂಪಿಸಿದರು. ಲಕ್ಷ್ಮಣ್ ಏಳಿಂಜೆ ವಂದಿಸಿದರು.
Kshetra Samachara
22/11/2020 10:19 pm