ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಆಶ್ರಮದ ಈ ಮ್ಯೂಸಿಯಂ ನೋಡೋದೆ ಚೆಂದ, ಮನಸ್ಸಿಗಾನಂದ...

ವರದಿ: ಇರ್ಷಾದ್ ಕಿನ್ನಿಗೋಳಿ

ಪಬ್ಲಿಕ್ ನೆಕ್ಸ್ಟ್, ಮಂಗಳೂರು

ಮಂಗಳೂರು: ಒಬ್ರು ವಸ್ತು ಸಂಗ್ರಹಕಾರರು, ಇನ್ನೊಬ್ರು ಕ್ರೈಸ್ತ ಧರ್ಮಗುರು. ಆದರೆ, ಇವರಿಬ್ಬರ ಆಸಕ್ತಿ, ಅಭಿರುಚಿ ಒಂದೇ. ನಮ್ಮ ಸಂಸ್ಕೃತಿ, ಕಲೆ ಉಳಿಸಿ, ಬೆಳೆಸುವ ಅಭಿಲಾಷೆ ಅವರದು. ಕಾಕತಾಳೀಯ ಎಂಬಂತೆ ಈ ಇಬ್ಬರು ಜೊತೆಯಾಗಿ, ಹೊಸದೊಂದು ವಸ್ತು ಸಂಗ್ರಹಾಲಯಕ್ಕೆ ಮುನ್ನುಡಿ ಬರೆದಿದ್ದಾರೆ. ಅಂದಹಾಗೆ ಇಲ್ಲಿ ಕಾಣಿಸುತ್ತಿರೋ ಹಲವು ವರುಷಗಳ ಹಿಂದಿನ ಟೇಪ್ ರೆಕಾರ್ಡರ್, ಕೈಗಡಿಯಾರ, ಗೋಡೆ ಗಡಿಯಾರ, ಮೊಬೈಲ್, ಕ್ಯಾಮೆರಾ, ದೂರವಾಣಿ, ಅಡುಗೆ ಮನೆ ಹಾಗೂ ಕೃಷಿ ಸಂಬಂಧಿತ ಪರಿಕರ ಇನ್ನೂ ಅದೆಷ್ಟೋ ವಸ್ತುಗಳು. ಇದೆಲ್ಲವೂ ಬಹುತೇಕ ಇಲ್ಲಿ ಕಾಣಿಸುತ್ತಿರೋ ಜಾನ್ ತಾವ್ರೋ ಅವರ ಸಂಗ್ರಹದ್ದು. ಆದರೆ, ಈ ರೀತಿ ಸಂಗ್ರಹಿಸಿಡಲು ನೆರವಾಗಿದ್ದು ಮಂಗಳೂರು ನಗರದ ಜೆಪ್ಪುವಿನಲ್ಲಿರುವ ಸಂತ ಅಂಥೋನಿ ಆಶ್ರಮ. ಸದ್ಯ ಆಶ್ರಮದ ಒಂದು ಭಾಗವೆನಿಸಿಕೊಂಡ ನೂರಾರು ವರುಷಗಳ ಹಿಂದಿನ ಕಟ್ಟಡ ಇದೀಗ ಮ್ಯೂಸಿಯಂ ಆಗಿ ಬದಲಾಗಿದೆ. ಸಂತ ಅಂಥೋನಿ ಹೋಂ ಮ್ಯೂಸಿಯಂ ಎಂದೇ ಹೆಸರಿಡಲಾಗಿದೆ. ನಗರದ ಜಂಜಾಟಗಳಿಂದ ಅಂತರ ಕಾಯ್ದುಕೊಂಡಿರುವ ಸಂತ ಅಂಥೋನಿ ಆಶ್ರಮ ಶಾಂತವಾದ ವಾತಾವರಣದ ಮಧ್ಯೆ ನೆಲೆಯಾಗಿದೆ.

ಇಲ್ಲಿರುವ ಬಹುತೇಕ ವಸ್ತುಗಳಲ್ಲಿ ತುಳುನಾಡಿಗೂ ಸಂಬಂಧಪಟ್ಟ ಪರಿಕರಗಳಿವೆ. ಇದೆಲ್ಲವನ್ನೂ ಸುಮಾರು 110 ದೇಶಗಳ ಪ್ರವಾಸಗೈದಿರುವ ಬೆಂದೂರ್ ನ ಜಾನ್ ತಾವ್ರೋ ಅವರ ಸಂಗ್ರಹದಿಂದಲೇ ಪಡೆಯಲಾಗಿದೆ. ಇನ್ನು ಆಶ್ರಮದ ನಿರ್ದೇಶಕ ಫಾದರ್ ಓನಿಲ್ ಡಿಸೋಜ ಕೂಡ ಕಲಾಸಕ್ತರಾಗಿದ್ದು, ಒಂದಲ್ಲ ಒಂದು ರೀತಿ ಸಂಸ್ಕೃತಿ ಉಳಿವಿಗೆ ಮತ್ತು ಮುಂದಿನ ಜನಾಂಗಕ್ಕೆ ನಮ್ಮ ಜಗತ್ತು ಪರಿಚಯಿಸುವ ಇರಾದೆ ಹೊಂದಿದ್ದಾರೆ.

ಒಟ್ಟಿನಲ್ಲಿ ಇಬ್ಬರು ಕಲಾಸಕ್ತರ ಅಭಿಲಾಷೆಯಿಂದ ಅಪೂರ್ವ ಮ್ಯೂಸಿಯಂ ನಗರದಲ್ಲಿ ತಲೆ ಎತ್ತುವಂತಾಗಿದೆ. ಸಾರ್ವಜನಿಕರಿಗೂ ಮುಕ್ತ ಅವಕಾಶವಿದ್ದು, ಒಂದೊಮ್ಮೆ ಇಲ್ಲಿಗೆ ಎಂಟ್ರಿ ಕೊಟ್ಟರೆ ನಮ್ಮ ಹಿರಿಯರ ಜೀವನಶೈಲಿ ಅರ್ಥವಾಗುವುದರಲ್ಲಿ ಸಂಶಯವಿಲ್ಲ.

Edited By : Manjunath H D
Kshetra Samachara

Kshetra Samachara

15/11/2020 02:27 pm

Cinque Terre

24.24 K

Cinque Terre

11

ಸಂಬಂಧಿತ ಸುದ್ದಿ