ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡೇರಿ ಮೀನುಗಾರರ ವಾದ ಏನು ಗೊತ್ತಾ!?

ಉಡುಪಿ: ಬಂದರು ನಿರ್ಮಾಣ ಸಂದರ್ಭ ನೀಡಿದ ಸೇತುವೆ ಭರವಸೆ ಈಡೇರಿಲ್ಲ. ಸೇತುವೆ ನಿರ್ಮಿಸಬೇಕು, ಬಂದರು ಪ್ರದೇಶದಲ್ಲಿ ಎಲ್ಲ ಮೂಲ ಸೌಲಭ್ಯ ಕಲ್ಪಿಸಬೇಕು. ಅಲ್ಲಿಯ ತನಕ ಪ್ರಾಂಗಣದಲ್ಲಿ ಹರಾಜಿಗೆ ಅವಕಾಶ ನೀಡಬಾರದು ಎನ್ನುವುದು ಕೊಡೇರಿ ಜನರ ಪರವಾಗಿ ಅಲ್ಲಿನ ಟ್ರಾಲ್ ಬೋಟ್ ಸಂಘದ ಅಧ್ಯಕ್ಷ ಶುಕ್ರದಾಸ್ ಖಾರ್ವಿ ವಾದಿಸುತ್ತಿದ್ದಾರೆ.

ಬಂದರಿನಲ್ಲಿ ಮೀನು ಹರಾಜಿಗೆ ಸಂಬಂಧಿಸಿ ಕೊಡೇರಿ ಭಾಗದ ಮೀನುಗಾರರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದೇವೆ. ಅವರು ವಿಧಿಸಿದ್ದ ಶರ್ತದಂತೆ ಮೀನುಗಾರಿಕೆ ಇಲಾಖೆಯಿಂದ ಷರತ್ತುಬದ್ಧ ತಾತ್ಕಾಲಿಕ ಲಿಖಿತ ಅನುಮತಿ ಪಡೆದಿದ್ದೇವೆ. ಆದರೂ ಕೊಡೇರಿ ಭಾಗದವರು ಕೆಲವು ಬೇಡಿಕೆ ಮುಂದಿಟ್ಟು ಮೀನು ಹರಾಜಿಗೆ ತಡೆಯೊಡ್ಡುತ್ತಿದ್ದಾರೆ. ಬಂದರು ಕೊಡೇರಿಗೆ ಮಾತ್ರ ಸೀಮಿತವಲ್ಲ. ಬದಲಾಗಿ ಎಲ್ಲ ಮೀನುಗಾರರಿಗೂ ಮುಕ್ತವಾಗಿದೆ. ಮೂಲ ಸೌಕರ್ಯ, ಸೇತುವೆ ಬಗ್ಗೆ ನಾವೂ ಅವರೊಡನೆ ಸೇರಿ ಹೋರಾಡಲು ಸಿದ್ಧ ಎನ್ನುವುದು ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ ಅವರ ನಿಲುವು.

"ಎರಡು ತಂಡಗಳ ಮೀನುಗಾರರ ಭಿನ್ನಾಭಿಪ್ರಾಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಆದರೆ, ಯಾರೇ ಆದರೂ ಕಾನೂನು ಕೈಗೆತ್ತಿಕೊಂಡರೆ ಅದನ್ನು ನಿಭಾಯಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಹೆಚ್ಚುವರಿ ಎಎಸ್ ಪಿ ಕುಮಾರಚಂದ್ರ ತಿಳಿಸಿದ್ದಾರೆ.

ಇದೀಗ ಬಂದರು ಪ್ರದೇಶದಲ್ಲಿ ಮತ್ತೆ ಘರ್ಷಣೆ ನಡೆದಿದೆ. ಕೆಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಉಭಯ ತಂಡಗಳ ದಾಂಧಲೆ ನಿಯಂತ್ರಿಸಲು ಮುಂದಾದ ಪೊಲೀಸರ ಮೇಲೆ ಕಲ್ಲು ತೂರಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

Edited By : Manjunath H D
Kshetra Samachara

Kshetra Samachara

09/11/2020 03:47 pm

Cinque Terre

15.29 K

Cinque Terre

0

ಸಂಬಂಧಿತ ಸುದ್ದಿ