ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಯಕ್ಷಗಾನದ ಮೇರು ಕಲಾವಿದ ಮಲ್ಪೆ ವಾಸುದೇವ ಸಾಮಗ ಇನ್ನಿಲ್ಲ

ವರದಿ: ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ

ಉಡುಪಿ: ಕರಾವಳಿ ಗಂಡು ಕಲೆಯ ಯಕ್ಷಗಾನದ ಸಾಮ್ರಾಟ ಮಾತಿನ ಚತುರ,ಯಕ್ಷಗಾನ ಪಂಡಿತ ಮಲ್ಪೆ ವಾಸುದೇವ ಸಾಮಗ ಇನ್ನಿಲ್ಲ ಯಕ್ಷಗಾನಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದಂತಹ ಈ ಮೇರು ಕಲಾವಿದ ವಿಶ್ವವನ್ನೇ ನಲುಗಿಸಿದ ಕರೋನಾ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಇಹಾಲೋಕವನ್ನು ತೇಜಿಸಿದ್ದಾರೆ, ಯಕ್ಷಗಾನದ ಹಲವು ಕಲಾವಿದರು ಕುಟುಂಬಸ್ಥರು ಹಾಗೂ ಅಭಿಮಾನಿಗಳು ಇವರನ್ನು ಅಗಲಿ ಇವರ ದಿವ್ಯಾತ್ಮಕ್ಕೆ ಶಾಂತಿ ಕೋರಿದ್ದಾರೆ.ಮಲ್ಪೆ ವಾಸುದೇವ ಸಾಮಗರಿಗೆ 71 ವಯಸ್ಸು ಯಕ್ಷಗಾನದ ತೆಂಕು ಮತ್ತು ಬಡಗು ನಲ್ಲಿ ಇವರು ಚಿರಪರಿಚಿತರು, ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಮೃತಪಟ್ಟಿರುವಾ ಸಾಮಗರು,ಇವರಿಗೆ ಅಲ್ಪಕಾಲಿಕ ಅಸೌಖ್ಯಕ್ಕೆ ಒಳಗಾಗಿದ್ದರು ಯಕ್ಷರಂಗದ ತಾಳಮದ್ದಲೆಯಲ್ಲಿ ವಿಶೇಷ ಛಾಪು ಮೂಡಿಸಿದ ಕಲಾವಿದ ಸಾಮಗರು.

ಕರಾವಳಿಯ ಯಕ್ಷಗಾನದಲ್ಲಿ ಭಾಷೆ ಪ್ರೌಢತೆ ಎದುರಾಳಿಯನ್ನು ಮಾತಿನಲ್ಲಿ ಕಟ್ಟಿಹಾಕುವ ಬುದ್ಧಿವಂತಿಕೆ ರಂಗಸ್ಥಳವನ್ನು ಬಿಸಿ ಇರಿಸುವಂತಹ ಜಾಣ್ಮೆ ತಾಳ್ಮೆ ಹಾಗೂ ಅಪಾರ ಯಕ್ಷಗಾನದ ಪಾಂಡಿತ್ಯವನ್ನು ಅರೆದು ಕುಡಿದ ಈ ಹಿರಿಯಜೀವ ಇಲ್ಲದಿರುವುದು ಕರಾವಳಿಯ ಯಕ್ಷಗಾನಕ್ಕೆ ತುಂಬಲಾಗದ ನಷ್ಟ, ಅನೇಕ ಹಿರಿಯ ನಟರು ತಾನು ರಂಗಸ್ಥಳದಲ್ಲಿ ಹೊಸ ಹೊಸ ಮಾತಿನ ಪ್ರಯೋಗಗಳನ್ನು ಮಾಡುವ ಮುಂಚೆ ಸಾಮಗರ ಮನೆಯ ಬಾಗಿಲನ್ನು ತಟ್ಟಿ ಅನುಭವವನ್ನು ತೆಗೆದುಕೊಂಡು ಹೋಗುತ್ತಿದ್ದರು ಸಾಮಗರನ್ನು ಯಕ್ಷಗಾನದಲ್ಲಿ ಮಾತಿನ ಮೂಲಕ ಕಟ್ಟಿಹಾಕುವ ಕಲಾವಿದ ಯಾರು ಇಲ್ಲ ಇಂತಹ ಕಲಾವಿದನ ಆತ್ಮಕ್ಕೆ ಪಬ್ಲಿಕ್ ನೆಕ್ಸ್ಟ್ ಕಡೆಯಿಂದ ಶಾಂತಿ ಕೋರಲಾಗಿದೆ.

Edited By : Nagesh Gaonkar
Kshetra Samachara

Kshetra Samachara

07/11/2020 11:28 am

Cinque Terre

25.18 K

Cinque Terre

5

ಸಂಬಂಧಿತ ಸುದ್ದಿ