ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಸ್ವಾವಲಂಬಿ ಬದುಕಿಗೆ ಘಮಘಮ ಮಲ್ಲಿಗೆ- ಸಜಿಪಮುನ್ನೂರಿನ ಮಲ್ಲಿಗೆ ಕೃಷಿಗೆ ಧರ್ಮಸ್ಥಳ ಯೋಜನೆ ಪ್ರೇರಣೆ

ಬಂಟ್ವಾಳ: ಕಡಿಮೆ ಜಾಗದಲ್ಲಿಯೂ ಮಲ್ಲಿಗೆ ಕೃಷಿ ಮಾಡಬಹುದು ಎಂಬುದಕ್ಕೆ ಸಜಿಪಮುನ್ನೂರಿನ ಮನೆಗಳು ಸಾಕ್ಷಿಯಾಗಿವೆ. ಇಲ್ಲಿನ ಹತ್ತು ಮನೆಗಳ ಪೈಕಿ ಐದು ಮನೆಗಳ ಮಹಿಳೆಯರು ತಾರಸಿಯಲ್ಲಿ ಮಲ್ಲಿಗೆ ಕೃಷಿ ಮಾಡುತ್ತಿದ್ದರೆ. ಉಳಿದ ಐವರು ಮನೆಯ ಅಂಗಳದಲ್ಲಿ ಮಲ್ಲಿಗೆ ಅರಳುತ್ತಿವೆ. ಸೌಮ್ಯ, ಆಶ್ಮಿತಾ, ಬೇಬಿ, ಭವಾನಿ, ಸರೋಜಿನಿ, ಭಾರತಿ, ಯಶೋಧ, ಹೇಮಲತಾ, ಪ್ರೇಮ ಹಾಗೂ ಕುಸುಮಾವತಿ ಮಲ್ಲಿಗೆ ಕೃಷಿಯಲ್ಲಿ ತೊಡಗಿಸಿಕೊಂಡವರು. ಸ್ವಾಭಿಮಾನದ ಜೊತೆಗೆ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡುವ ಧರ್ಮಸ್ಥಳ ಯೋಜನೆ ಜನರಲ್ಲಿ ಹೊಸಭರವಸೆಯನ್ನು ಬೆಳೆಸುತ್ತಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಸಹಾಯ ಗುಂಪು ಹಾಗೂ ಪ್ರಗತಿ ಬಂಧು ತಂಡಗಳ ಸದಸ್ಯರಿಗೆ ಸ್ವಉದ್ಯೋಗದ ಪ್ರೇರೇಪಣೆ ನೀಡಲಾಗುತ್ತಿದೆ. ಅದರಂತೆ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ಸಜಿಪಮುನ್ನೂರು ಗ್ರಾಮದ 10 ಮಂದಿ ಸ್ವಸಹಾಯ ಗುಂಪಿನ ಸದಸ್ಯರಿಗೆ ತಲಾ 25 ಮಲ್ಲಿಗೆ ಗಿಡಗಳನ್ನು ಒದಗಿಸಲಾಯಿತು. ಬಳಿಕ ಮಲ್ಲಿಗೆ ಕೃಷಿಗೆ ಪೂರಕವಾದ ತರಬೇತಿಯನ್ನೂ ನೀಡಲಾಯಿತು. ಅದರಂತೆ ಈ ಹತ್ತು ಮಂದಿ ತಮ್ಮ ಮನೆಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

ಮಲ್ಲಿಗೆ ಕೃಷಿಗೆ ಬೇಕಾದದ್ದು ಅದರ ಬುಡದಲ್ಲೇ ನಿಂತು ಆರೈಕೆ ಮಾಡುವ ಕಲೆ. ಪ್ರಸ್ತುತ ಧರ್ಮಸ್ಥಳ ಯೋಜನೆಯಿಂದ ಈ ಮಹಿಳೆಯರಿಗೆ ಉಚಿತವಾಗಿ ಮಲ್ಲಿಗೆ ಗಿಡಗಳನ್ನು ನೀಡಲಾಗಿದೆ. ಅವುಗಳನ್ನು ಪೋಷಿಸುವ ವಿಧಾನದ ಕುರಿತು ಯೋಜನೆಯ ಕೃಷಿ ಮೇಲ್ವಿಚಾರಕರು ಮಾಹಿತಿ ನೀಡುತ್ತಾರೆ. ಮೂರ್ನಾಲ್ಕು ತಿಂಗಳಲ್ಲಿ ಗಿಡ ಬೆಳೆದು ಹೂ ಬಿಡಲು ಆರಂಭಿಸಿದ ನಂತರ, ಹೂ ಕಟ್ಟುವುದು ಹಾಗೂ ಅದರ ಮಾರ್ಕೆಟಿಂಗ್ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಗಿಡವನ್ನು ಸರಿಯಾಗಿ ಪೋಷಿಸಿದರೆ, ಸಮೃದ್ಧ ಆದಾಯ ಇದರಲ್ಲಿದೆ. 25 ಗಿಡಗಳಿಂದ ಕನಿಷ್ಠ 2 ಅಟ್ಟಿಯಷ್ಟು ಮಲ್ಲಿಗೆಯನ್ನು ಬೆಳೆಯಬಹುದು. ಹೀಗಾದರೆ, ದಿನಕ್ಕೆ 1 ಸಾವಿರದಷ್ಟು ಆದಾಯ, ಸೀಸನ್ ನಲ್ಲಿ ಉತ್ತಮ ಆದಾಯವೂ ದೊರಕುತ್ತದೆ.

Edited By : Nagesh Gaonkar
PublicNext

PublicNext

08/03/2022 07:24 pm

Cinque Terre

37.51 K

Cinque Terre

0

ಸಂಬಂಧಿತ ಸುದ್ದಿ