ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಕೃಷಿಯಲ್ಲಿ ಯಶಸ್ಸು ಕಂಡ ಯುವ ಕೃಷಿಕ ನಾಗೇಶ್ ಪೂಜಾರಿ

ಮೂಡುಬಿದಿರೆ: ಪ್ರಸ್ತುತ ದಿನಗಳಲ್ಲಿ ಉದ್ಯೋಗಕ್ಕಾಗಿ ಹೊರ ರಾಜ್ಯ, ದೇಶಗಳಿಗೆ ಹೋಗುವವರೇ ಜಾಸ್ತಿ. ಆದರ ನಡುವೆ ಇಲ್ಲೋರ್ವ ಯುವ ಕೃಷಿಕ ಮುಂಬೈನಲ್ಲಿ ಕೆಲಸವನ್ನು ಬಿಟ್ಟು ಊರಿಗೆ ಬಂದು ಅಡಿಕೆ, ತೆಂಗು, ಬಾಳೆ ಕೃಷಿಯ ಜೊತೆ ಜೊತೆಗೆ ಫಾರಂ ಕೋಳಿಗಳನ್ನು ಸಾಕಾಣಿಕೆ ಮಾಡಿ ಜೀವನ ನಡೆಸುತ್ತಿದ್ದಾರೆ. ಹಾಗಾದರೆ ಯಾರವರು ಅಂತೀರ ಅವರೇ ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮದ ನಿವಾಸಿ ನಾಗೇಶ್.

2017ರಲ್ಲಿ ಮುಂಬೈಯಿಂದ ಊರಿಗೆ ಬಂದ ಇವರು ತನ್ನದೇ ಯೋಚನೆಯಲ್ಲಿ ಕೋಳಿ ಸಾಕಾಣಿಕೆಯ ವಹಿವಾಟನ್ನು ಮಾಡಬೇಕೆಂಬ ಆಸಕ್ತಿಯನ್ನು ತೋರಿದರು. ಸುಮಾರು 7 ಲಕ್ಷ ರೂ. ಬ್ಯಾಂಕಿನಿಂದ ಲೋನ್ ಪಡೆದು ಶೇಡ್ ನಿರ್ಮಾಣ ಮಾಡಿಕೊಂಡಿದ್ದಾರೆ. ಜೊತೆಗೆ ಕೋಳಿಗಳಿಗೆ ಬೇಕಾಗಿರುವ ನೀರು, ಬೆಳಕಿನ ವ್ಯವಸ್ಥೆ ಹಾಗೂ ಅದಕ್ಕೆ ಬೇಕಾದ ಫುಡ್‌ಅನ್ನು ಹಾಕಿ ಅದರ ಪಾಲನೆ ಪೋಷಣೆ ಮಾಡುತ್ತಾ ಬಂದಿದ್ದಾರೆ.

ಒಂದು ಬಾರಿ ಸುಮಾರು 3,100 ಮರಿ ಕೋಳಿಗಳನ್ನು ಸ್ಥಳೀಯ ಕಂಪೆನಿಯಿಂದ ತರಿಸಿ ಅದರ ಪಾಲನೆ ಪೋಷಣೆಯನ್ನು ಮಾಡಿದ್ದರು. ಬಳಿಕ ಅವು ಬೆಳವಣಿಗೆಯಾದ 40 ದಿನಗಳ ನಂತರ ಕಂಪೆನಿಯ ವಾಹನಗಳು ಬಂದು ಕೋಳಿಗಳನ್ನು ಸಾಗಾಟ ಮಾಡಿ ಬೇರೆ ಬೇರೆ ಕಡೆಗೆ ರಫ್ತು ಮಾಡುತ್ತಾರೆ. ಸರಿಸುಮಾರು ಕೋಳಿ ಸಾಕಾಣಿಕೆಗೆ ಕಂಪೆನಿ ಕಡೆಯಿಂದ ಫುಡ್‌ ಅನ್ನು ನೀಡಲಾದರೂ ಉಳಿದೆಲ್ಲಾ ಕೋಳಿಗಳ ಸಾಕಾಣಿಕೆಯ ಕೆಲಸ ಕಾರ್ಯಗಳನ್ನು ಇವರೇ ನಿರ್ವಹಿಸುತ್ತಾರೆ.

ಕೊರೊನಾ ಕಾಲದಲ್ಲಿ ಸತ್ತಿರುವ ಕೋಳಿಗಳನ್ನು ಕಂಪನಿಯೇ ಗುಂಡಿ ತೆಗೆದು ಹೂತಿದ್ದಾರೆ. ಈ‌ ವೇಳೆ‌ ನಷ್ಟ ಅನುಭವಿಸಿದ್ದರು. ಉಳಿದ ಸಮಯದಲ್ಲಿ ಲಾಭವೇ ಇವರನ್ನು ಹರಸಿ ಬಂದಿದೆ. ಕೋಳಿ ಸಾಕಾಣಿಕೆಯ ಗೊಬ್ಬರವನ್ನು ತೋಟಗಳಿಗೆ ಹಾಗೂ ಉಳಿದ ಗೊಬ್ಬರವನ್ನು ಮಾರಾಟ ಮಾಡಿ ಲಾಭವನ್ನು ಪಡೆಯುತ್ತಿದ್ದಾರೆ.

ವೈಶಾಲಿ ಶೆಟ್ಟಿ, ಪೂವಾಳ

Edited By : Nagesh Gaonkar
PublicNext

PublicNext

03/03/2022 12:09 pm

Cinque Terre

44.52 K

Cinque Terre

1

ಸಂಬಂಧಿತ ಸುದ್ದಿ