ಉಡುಪಿ: 50 ಎಕರೆ ಹಡಿಲು ಗದ್ದೆಗಳ ಪುನಶ್ಚೇತನಕ್ಕೆ ಭತ್ತ ಕೃಷಿ ಅಭಿಯಾನದ ಮೂಲಕ ನಿಟ್ಟೂರು ಅನುದಾನಿತ ಪ್ರೌಢಶಾಲೆಯ ಪ್ರಯತ್ನಕ್ಕೆ ಮೊದಲ ಫಲ ಸಿಕ್ಕಿದೆ.ವಿದ್ಯಾರ್ಥಿಗಳು ಮತ್ತು ಸ್ಥಳೀಯರ ಸಹಾಯದಿಂದ ಗದ್ದೆಯಲ್ಲಿ ಬೆಳೆಸಿದ್ದ ಭತ್ತದ ಮೊದಲ ಫಸಲಿನ ಕಟಾವು ಕಾರ್ಯ ಇವತ್ತು ಉಡುಪಿಯಲ್ಲಿ ನಡೆಯಿತು.
ಈ ವರ್ಷದ ಮಾರ್ಚ್ ತಿಂಗಳಲ್ಲಿ ನಿಟ್ಟೂರು ಶಾಲಾ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಹೆತ್ತವರು, ಸ್ಥಳೀಯ ಜನತೆ ಹಡೀಲು ಗದ್ದೆ ಪುನಶ್ಚೇತನದ ಅಭಿಯಾನಕೈಗೊಂಡಿದ್ದರು.ಇದರ ಭಾಗವಾಗಿ ನಗರದ ಅರವತ್ತು ಎಕರೆ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಲಾಗಿತ್ತು.
ಶಾಲಾಡಳಿತ ಮಂಡಳಿಯು ಮುಖ್ಯ ಶಿಕ್ಷಕ ಮುರಲಿ ಕಡೆಕಾರ್ ನೇತೃತ್ವದಲ್ಲಿ ಫೆಬ್ರವರಿಯಲ್ಲೇ ನಿಟ್ಟೂರು, ಕರಂಬಳ್ಳಿ, ಕಕ್ಕುಂಜೆ, ಪುತ್ತೂರು, ಪೆರಂಪಳ್ಳಿಯಲ್ಲಿ(5 ವಲಯ) ಹಡೀಲು ಗದ್ದೆಯಲ್ಲು ಹುಣಿ ಕಟ್ಟುವುದು, ಉಳುಮೆ, ಬಿತ್ತನೆ, ನಾಟಿ ಸಹಿತ ವಿವಿಧ ಕೆಲಸ ನಿರ್ವಹಿಸಿತ್ತು.ಕೊರೊನಾದಿಂದಾಗಿ ಕಾರ್ಮಿಕರ ಕೊರತೆ ನಿವಾರಣೆ ಮಾಡುವಲ್ಲಿ ಇದು ಮಹತ್ವದ ಕೊಡುಗೆ ನೀಡುತ್ತು.
ಹಾಗೆ ನಾಟಿ ಮಾಡಿದ ಗದ್ದೆಗಳಲ್ಲಿ ಫಸಲು ಬಂದಿದ್ದು ಅದನ್ನು ಕಟಾವು ಮಾಡುವ ಕಾರ್ಯ ಇವತ್ತು ಪ್ರಾರಂಭಗೊಂಡಿತು.ನಾಲ್ವರು ನುರಿತ ಕೆಲಸಗಾರರು ಮುರಳಿ ಕಡೆಕಾರ್ ಮಾರ್ಗದರ್ಶನದಲ್ಲಿ ಕಟಾವು ಕಾರ್ಯ ಮಾಡಿದರು.
Kshetra Samachara
02/11/2020 07:33 pm