ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ : ತುಳುನಾಡಿನ ಆಚಾರ ವಿಚಾರಗಳೇ ವಿಭಿನ್ನ

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬಿರ್ಮಣ್ಣ ಗೌಡ ಅವರು ಈ ಅಪರೂಪದ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾರೆ. ಬಿರ್ಮಣ್ಣ ಗೌಡರು ಮೂಲತ ಶ್ರಮಜೀವಿ ಹಿರಿಯ ಕೃಷಿಕರಾಗಿದ್ದಾರೆ. ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದ ಹಾಗೂ ಕೃಷಿ ಉಪಯೋಗಿ, ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವುದರಲ್ಲಿಯೂ ಇವರದು ಎತ್ತಿದ ಕೈ. ತುಳುನಾಡಿನ

ಪ್ರದಾಯಗಳಲ್ಲಿ ಒಂದಾದ ಗೃಹಪ್ರವೇಶ ಸಂದರ್ಭದಲ್ಲಿ ಮನೆ ತುಂಬಲು ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಭತ್ತದ ಅಕ್ಕಿಯ ಮುಡಿಯನ್ನು ಇವರು ತಯಾರಿಸುವಲ್ಲಿ ದ್ದಹಸ್ತರು.ಮುಡಿಯಲ್ಲಿ ಸಂಗ್ರಹಿಟ್ಟ ಅಕ್ಕಿ/ಭತ್ತ ಬಹುಕಾಲದ ವರೆಗೂ ಕೆಡದೇ

ಭದ್ರವಾಗಿರುತ್ತವೆ.ಆದ್ದರಿಂದ ಹಿಂದಿನ ಕಾಲದಲ್ಲಿ ಜನತೆ ಅಕ್ಕಿ, ಭತ್ತಗಳನ್ನು ಮುಡಿಯಲ್ಲಿ ಕಟ್ಟಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಬಿರ್ಮಣ್ಣ ಗೌಡ ಅವರು ಮುಡಿ ಕಟ್ಟುವುದು ಮಾತ್ರವಲ್ಲದೇ,ಇತರೆ ಗೃಹೋಪಯೋಗಿ, ಕೃಷಿ ಉಪಯೋಗಿ ವಸ್ತುಗಳಾದ ನೇಗಿಲು,ನಿಗ,ಮೊಸರು ಕಡೆಯುವ ಸಾಧನ, ಅಂರ್ಬುಚಿ,ಕುಡುಪು, ಗೆರಟೆ ಸೌಟು,ಹಾರೆಯ ಹಿಡಿ, ನೆಲಹಾಸು,ಅಡಿಕೆ ಮರಹತ್ತುವ ಮನೆಹಗ್ಗ, ಬಳ್ಳಿಯ ಬುಟ್ಟಿ, ಕತ್ತಿಗೆ ಮರದ ಹಿಡಿ, ಕೊಡೆ ರಿಪೇರಿ, ಕೋಳಿಯ ಗೂಡು,ಮೇಜು, ಕುರ್ಚಿ ಸಹಿತ ಮರದ ಕೆಲಸಗಳು ಸೇರಿದಂತೆ ಇನ್ನೂ ಹಲವಾರು ಗೃಹೋಪಯೋಗಿ ವಸ್ತುಗಳ ತಯಾರಿ ಇವರು ಬಳ್ಳವರಾಗಿದ್ದಾರೆ.

ಬಿರ್ಮಣ್ಣ ಗೌಡರು ಮುಡಿ ಕಟ್ಟುವುದನ್ನು ಹಾಗೂ ಇತರೆ ವಸ್ತುಗಳ ತಯಾರಿಕೆಯನ್ನು ತಂದೆ ಹಾಗೂ ಇತರರು ತಯಾರಿಸುವುದನ್ನು ನೋಡಿ ಕಲಿತ್ತಿದ್ದೇನೆ ಎನ್ನುತ್ತಾರೆ. ಕೃಷಿಯ ಜತೆಗೆ ಈ ರೀತಿಯ ಕಾಯಕವನ್ನು ಇವರು ಮಾಡಿಕೊಂಡು ಬಂದಿದ್ದಾರೆ. ಇವರನ್ನು ನೂಜಿಬೈಲ್ ತೆಗ್ರ್ ತುಳುಕೂಟೋ ಸಂಘಟನೆ ವತಿಯಿಂದ ಸಮ್ಮಾನಿಸಿ ಗೌರವಿಸಲಾಗಿದೆ.

ಪ್ಲಾಸ್ಟಿಕ್ ಯುಕ್ತ ಪ್ರಸ್ತುತ ದಿನಗಳಲ್ಲಿ ಇಂತಹ ವಸ್ತುಗಳ ತಯಾರಿ ತಿಳಿದವರು ಅಲ್ಲೊಬ್ಬರೊಬ್ಬರು ಕಾಣಸಿಗುತ್ತಾರೆ.ಮುಡಿ ಕಟ್ಟು ಏನೆಂದು ತಿಳಿದವರು ವಿರಳವಾಗಿರುವಾಗ ಅದನ್ನು ಕಟ್ಟುವುದನ್ನು ತಿಳಿದವರೂ ಇನ್ನೂ ವಿರಳವಾಗಿದ್ದಾರೆ ಎನ್ನುತ್ತಾರೆ ಬಿರ್ಮಣ್ಣ ಗೌಡರು. ಇವರ ಕಾಯಕಕ್ಕೆ ಪತ್ನಿ ಸೀತಮ್ಮ ಅವರು ಸಹಕಾರ ನೀಡುತ್ತಿದ್ದಾರೆ.ಗುಡಿ ಕೈಗಾರಿಕೆಗಳಂತೆ ಈ ರೀತಿಯ ಗೃಹೋಪಯೋಗಿ, ಕೃಷಿ ಉಪಯೋಗಿ ವಸ್ತುಗಳ ತಯಾರಿಕೆಯನ್ನು ಪ್ರೋತ್ಸಾಹಿಸಿ, ದೇಶಿಯ-ಗ್ರಾಮೀಣ ಕಾಯಕಗಳ ಉಳಿವಿಗೆ ಮುಂದಾಗುವ ಮೂಲಕ ಸರಕಾರವು ಇಂತವರಿಗೆ ಪ್ರೋತ್ಸಾಹ ನೀಡಿ, ಇದರ ಉಳಿವಿಗೆ ಮುಂದಾಗಬೇಕಿದೆ ಎನ್ನುತ್ತಾರೆ ಬಿರ್ಮಣ್ಣ ಗೌಡರು.

Edited By : Nagesh Gaonkar
Kshetra Samachara

Kshetra Samachara

02/11/2020 09:39 am

Cinque Terre

26.76 K

Cinque Terre

5

ಸಂಬಂಧಿತ ಸುದ್ದಿ