ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ: ವಾರಾಹಿ ನದಿಯಲ್ಲಿ ಮುಳುಗಿ ಕೃಷಿಕ ಸಾವು

ಸಿದ್ದಾಪುರ: ಶಂಕರನಾರಾಯಣ ಗ್ರಾಮದ ತಲ್ಲೂರುಮಕ್ಕಿಯಲ್ಲಿ ಕೃಷಿಕರೊಬ್ಬರು ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಸ್ಥಳೀಯ ನಿವಾಸಿ, ಕೃಷಿಕ ಬಾಬು ನಾಯ್ಕ (55) ಮೃತರು. ಅವರು ಸಂಜೆ ವಾರಾಹಿ ಹೊಳೆಯ ಬದಿ ಇರುವ ಕೃಷಿ ಪಂಪ್‌ಸೆಟ್ ಬಂದ್ ಮಾಡಲು ನದಿಯ ಬದಿಗೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಬಾಬು ನಾಯ್ಕ ಅವರ ಮೃತದೇಹವು ಶುಕ್ರವಾರ ಬೆಳಗ್ಗೆ ಮನೆಯ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ.

ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ನದಿಯಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಪುತ್ರ ಮಂಜುನಾಥ ನಾಯ್ಕ ಪೊಲೀಸರಿಗೆ ದೂರು ನೀಡಿದ್ದು, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Somashekar
Kshetra Samachara

Kshetra Samachara

28/05/2022 12:23 pm

Cinque Terre

17.19 K

Cinque Terre

0

ಸಂಬಂಧಿತ ಸುದ್ದಿ