ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ತೂಫಾನ್ ಗೆ ಸಿಲುಕಿದ ಬೋಟ್ ನಲ್ಲಿ ಆರು ಮೀನುಗಾರರ ಜೀವನ್ಮರಣ ಹೋರಾಟ!: ಆಪತ್ಪಾಂಧವರಾಗಿ ಬಂದರು ಈ ಕಡಲವೀರರು

ಮಲ್ಪೆ: ಎರಡು ದಿನ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ, ಗಾಳಿಗೆ ಸಾಕಷ್ಟು ಹಾನಿಯಾಗಿದೆ. ಅದರಲ್ಲೂ ಮೀನುಗಾರಿಕೆಗೆ ತೆರಳಿದ ಮೀನುಗಾರರು ಸಮುದ್ರ ಮಧ್ಯದಲ್ಲೇ ಹವಾಮಾನ ವೈಪರೀತ್ಯಕ್ಕೆ ಸಿಲುಕುವ ಘಟನೆ ನಿರಂತರ ನಡೆಯುತ್ತಲೇ ಇದೆ.

ನಿನ್ನೆ ಮೀನುಗಾರರು, ಶೈಲಜಾ ಎಂಬ ತ್ರಿ ಸೆವೆಂಟಿ ಬೋಟ್ ಮುಳುಗುತ್ತಿರುವ ಸಂದರ್ಭ ಮಲ್ಪೆ ಬಂದರಿನ ಕರಾವಳಿ ಕಾವಲು ಪಡೆಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಈ ಆಪತ್ಕಾಲದಲ್ಲಿ "ಮಕರ ಜ್ಯೋತಿ" ಪರ್ಸೀನ್ ಬೋಟ್ ನ ತಂಡೇಲ ಕಿಶೋರ್ ಕರ್ಕೇರ, ತ್ರಿ ಸೆವೆಂಟಿ ಬೋಟ್ ನ ಅಧ್ಯಕ್ಷರಾದ ಗಣೇಶ್ ಕಲ್ಮಾಡಿ ಹಾಗೂ ಶಶಿಧರ್ ಕುಂದರ್ ಇನ್ನಿತರರು ತಮ್ಮ ಜೀವದ ಹಂಗನ್ನು ತೊರೆದು ತೂಫಾನ್ ಸನ್ನಿವೇಶದಲ್ಲೂ ಸಣ್ಣ ಟ್ರಾಲ್ ದೋಣಿ ಹಿಡಿದುಕೊಂಡು ಶೈಲಜಾ ಬೋಟ್ ನಲ್ಲಿ ಜೀವಾಪಾಯದಲ್ಲಿದ್ದ ಎಲ್ಲ ಆರು ಜನರ ಪ್ರಾಣ ರಕ್ಷಣೆ ಮಾಡಿದ್ದಾರೆ.

ಆದರೆ, ಈ ಅಸಲಿ ಕಡಲ ವೀರರ ಹೆಸರು ಎಲ್ಲೂ ಕೇಳಿಸಿಯೇ ಇಲ್ಲ. ಪ್ರಾ ಣವನ್ನೇ ಪಣವಾಗಿಟ್ಡು, ರಕ್ಷಿಸಿದವರಿಗೆ ಸದ್ಯ ಜಿಲ್ಲೆಯಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Edited By :
Kshetra Samachara

Kshetra Samachara

22/09/2020 01:09 pm

Cinque Terre

41.61 K

Cinque Terre

2

ಸಂಬಂಧಿತ ಸುದ್ದಿ