ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕನ್ನಡ ಪ್ರೀತಿ ಮೆರೆದ ಸರ್ಕಾರಿ ಬಸ್ ಚಾಲಕ, ಕಂಡಕ್ಟರ್!

ಮಂಗಳೂರು: ಕನ್ನಡ ಅಂದ್ರೆ ಜೀವ, ಕನ್ನಡ ಅಂದ್ರೆ ಉಸಿರು. ಕ‌ನ್ನಡ ಅಂದರೆ ಬದುಕು. ಹೌದು. ನಮ್ಮ ಮಾತೃಭಾಷೆ ಕನ್ನಡ ಭಾಷೆಯ ಮೇಲಿನ ಪ್ರೀತಿ ಸದಾ ಜೀವಂತವಾಗಿರಬೇಕು‌. ಕನ್ನಡ ಮೇಲಿನ ಪ್ರೀತಿಯನ್ನು ತೋರಿಸಿದ ಅನೇಕರು ಇರಬಹುದು. ಆದರೆ, ಇವರು ಮಾತ್ರ ಎಲ್ಲರಂತಲ್ಲ.

ಇಲ್ಲೊಬ್ರು ಸರ್ಕಾರಿ ಬಸ್ ಚಾಲಕ ಮತ್ತು ನಿರ್ವಾಹಕರು ವಿಶೇಷ ರೀತಿಯಲ್ಲಿ ಕನ್ನಡ ಪ್ರೇಮ ಮೆರೆದಿದ್ದಾರೆ. ಈ ಚಾಲಕರ ಹೆಸರು ಬಸನಗೌಡ ಪೊಲೀಸ್ ಪಾಟೀಲ್. ನಿರ್ವಾಹಕರ ಹೆಸರು ಮಲ್ಲಿಕಾರ್ಜುನ.

ಇವರಿಬ್ಬರು ಮೈಸೂರಿನ ಗುಂಡ್ಲುಪೇಟೆ ಕೆಎಸ್ಆರ್ ಟಿಸಿ ಡಿಪೋದವರು. 2008 ರಿಂದ ಇವರಿಬ್ಬರು ತಮಗೆ ನೀಡಿದ ಸರ್ಕಾರಿ ಬಸ್ಸನ್ನು ಜೋಪಾನವಾಗಿಟ್ಟು, ತಾಯಿಯ ಅಕ್ಕರೆ ತೋರಿಸಿದ್ದಾರೆ‌‌.

ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಬಂದಾಗ ಇವರಿಗೆ ನೀಡಲಾಗುವ ಬಸ್ ತುಂಬಾ ಕನ್ನಡ ಧ್ವಜವನ್ನು ಅಲಂಕಾರ ಮಾಡಿ ಕನ್ನಡದ ಹಿರಿಯ ಸಾಹಿತಿಗಳ ಭಾವಚಿತ್ರಗಳನ್ನು ಅಂಟಿಸಿ, ಕನ್ನಡ ಹಾಡುಗಳನ್ನು ಪರಿಚಯಿಸುತ್ತಾ, ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುತ್ತಾರೆ.

ಜೊತೆಗೆ ಬಸ್ಸಿನಲ್ಲಿ ಕನ್ನಡ ಸಾಹಿತ್ಯ ಪರಂಪರೆಯನ್ನು ಪರಿಚಯಿಸುವ ಬರಹಗಳು ಕೂಡ ಇವೆ. ಚಿಕ್ಕ ಚೊಕ್ಕ ಗ್ರಂಥಾಲಯ ಇವೆ. ಮೈಸೂರಿನಿಂದ ಮಂಗಳೂರಿಗೆ ಬಂದಿರುವ ಈ ಬಸ್ಸು ನವೆಂಬರ್ ತಿಂಗಳಿಡೀ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಸಂಚರಿಸಲಿದೆ. ಸುಮಾರು ಹತ್ತು ಸಾವಿರದಷ್ಟು ಖರ್ಚು ಮಾಡಿ ಬಸ್ಸನ್ನು ಕನ್ನಡಮಯ‌ ಮಾಡಲಾಗಿದೆ.

Edited By : Nagesh Gaonkar
Kshetra Samachara

Kshetra Samachara

04/11/2020 07:27 pm

Cinque Terre

15.38 K

Cinque Terre

1

ಸಂಬಂಧಿತ ಸುದ್ದಿ