ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ತಮಿಳುನಾಡು ಸಿಎ ಕಮಲಶಿಲೆ ದೇವಸ್ಥಾನದಲ್ಲಿ ಭಕ್ತರ ಊಟದೆಲೆ ಎತ್ತುವ ಮೂಲಕ ತಾಯಿ ಸೇವೆ !

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ದೇವಾಲಯ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸೇವೆ 9 ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ.

ಆದರೆ, ಈ ತಾಯಿ ಸನ್ನಿಧಾನದಲ್ಲಿ ಭಕ್ತರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸೇವೆ ಸಲ್ಲಿಸುತ್ತಾರೆ, ಹರಕೆ ಹೊರುತ್ತಾರೆ. ಹಾಗೆಯೇ ಇದೀಗ ವಿಶೇಷ ಎನ್ನುವಂತೆ ತಮಿಳುನಾಡು ಮೂಲದ ರಾಜಶೇಖರ ಎಂಬವರು ದೇವಸ್ಥಾನದಲ್ಲಿ ಭಕ್ತರು ಊಟ ಮಾಡಿದ ಎಲೆಯನ್ನು ಎತ್ತುವುದು ಹಾಗೂ ಭಕ್ತರಿಗೆ ನೀರು ಕೊಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ವ್ಯಕ್ತಿ ತಮಿಳುನಾಡಿನ ಪ್ರಸಿದ್ಧ ಸಿಎ ಆಗಿದ್ದು, ಪ್ರತಿವರ್ಷ ನವರಾತ್ರಿ ದಿನದಂದು ತಾಯಿ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿಯ ಸೇವೆ ಮಾಡುತ್ತಾರೆ. ಇಂತಹ ಅಪರೂಪದ ವ್ಯಕ್ತಿ ಯ ಬಗ್ಗೆ ಖ್ಯಾತ ನ್ಯಾಯವಾದಿ ಉಮೇಶ್ ಶೆಟ್ಟಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಧರ್ಮದರ್ಶಿ ಸಚ್ಚಿದಾನಂದ ಚಾತ್ರ ಅವರು ಕೂಡ ಖುಷಿ ವ್ಯಕ್ತ ಪಡಿಸಿ, "ತಾಯಿಯ ಸೇವೆಗೆ ವಿಶೇಷ ಭಕ್ತರ ಸೇವೆ ಇರುತ್ತದೆ. ಅವರವರ ಭಕ್ತಿಭಾವಕ್ಕೆ ಈ ಸೇವೆ ನಡೆಯುತ್ತದೆ" ಎಂದರು.

Edited By : Manjunath H D
Kshetra Samachara

Kshetra Samachara

19/10/2020 09:22 pm

Cinque Terre

25.57 K

Cinque Terre

2

ಸಂಬಂಧಿತ ಸುದ್ದಿ