ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಬೀದಿ ನಾಟಕ ಮೂಲಕ ಸಾಮಾಜಿಕ ಜಾಗೃತಿಯನ್ನು ಮೂಡಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಬಂಟ್ವಾಳ: ಶ್ರೀ ಕ್ಷೇ.ಧ.ಗ್ರಾ.ಯೊ.ಬಿ.ಸಿ ಟ್ರಸ್ಟ್(ರಿ); ಬಂಟ್ವಾಳ, ಸಿದ್ಧಕಟ್ಟೆ ವಲಯ ಮತ್ತು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮಗಳ ಅಂಗವಾಗಿ ಸಿದ್ಧಕಟ್ಟೆ ಯಲ್ಲಿ ಶೃತಿ ಸಾಂಸ್ಕೃತಿಕ ಕಲಾ ತಂಡ, ದಾವಣಗೆರೆ ಇದರ ಕಲಾವಿದರಿಂದ ಗಾಯನ, ಕಿರುಪ್ರಹಸನ ಬೀದಿ ನಾಟಕ ಪ್ರದರ್ಶನ ಯೇರ್ಪಡಿಸಿ ಸಾಮಾಜಿಕ ಜವಾಬ್ದಾರಿ, ಪರಿಸರ ಸ್ವಚ್ಛತೆ, ಆರೋಗ್ಯ ರಕ್ಷಣೆ, ವ್ಯಸನ ಮುಕ್ತ ಸಮಾಜ ನಿರ್ಮಾಣ ದ ಜಾಗೃತಿ ಮೂಡಿಸಲಾಯಿತು.

ತಾಲೂಕು ಯೋಜನಾಧಿಕಾರಿ ಜಯಾನಂದ. ಪಿ. ಉದ್ಘಾಟಿಸಿ ನಮ್ಮ ಜನರು ಪ್ರಜ್ಞಾವಂತರು, ಇನ್ನಷ್ಟು ಜಾಗೃತ ರಾಗಲು ಇಂತಹ ಕಾರ್ಯಕ್ರಮಗಳು ಪ್ರೇರಣೆ ನೀಡುತ್ತವೆ. ನಾವು ಇದರ ಸಂದೇಶವನ್ನು ನಿತ್ಯ ಅಳವಡಿಸಿಕೊಂಡಾಗ ಕಲಾವಿದರ ಶ್ರಮ ಸಾರ್ಥಕ ವಾಗುತ್ತದೆ ಎಂದರು. ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಕರ್ಪೆ, ಅಧ್ಯಕ್ಷತೆ ವಹಿಸಿದ್ದರು.

ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ವಲಯ ಅಧ್ಯಕ್ಷ ಸದಾನಂದ ಶೀತಲ್, ಜನಜಾಗೃತಿ ವೇದಿಕೆ ನಿಕಟಪೂರ್ವ ವಲಯಾಧ್ಯಕ್ಷ, ತಾಲೂಕು ಸಮಿತಿ ಸದಸ್ಯ ಜಗದೀಶ್ ಕೊಯ್ಲ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್ ಕಲಾವಿದರನ್ನು ಅಭಿನಂದಿಸಿದರು. ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಪ್ನಾ, ಸಿದ್ಧಕಟ್ಟೆ ವಲಯ ಒಕ್ಕೂಟಗಳ ಅಧ್ಯಕ್ಷರುಗಳು, ಸೇವಾ ಪ್ರತಿನಿಧಿಗಳು, ಉಪಸ್ಥಿತರಿದ್ದರು.ಸೇವಾ ಪ್ರತಿನಿಧಿ ರಾಘವೇಂದ್ರ ಭಟ್ ಸ್ವಾಗತಿಸಿ ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ ನಿರೂಪಿಸಿ ವಂದಿಸಿದರು.

Edited By : Manjunath H D
Kshetra Samachara

Kshetra Samachara

16/10/2020 07:25 pm

Cinque Terre

17.43 K

Cinque Terre

3

ಸಂಬಂಧಿತ ಸುದ್ದಿ