ಉಡುಪಿ: ಉಡುಪಿ ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಇಲಿಜ್ವರ ಪಸರಿಸಿದ್ದು ಆತಂಕ ಪಡುವ ಅಗತ್ಯ ಇಲ್ಲ ,ಇದರ ಚಿಕಿತ್ಸೆಯೂ ದುಬಾರಿಯಲ್ಲ ,ಆದರೆ ನಿರ್ಲಕ್ಷ್ಯ ಸಲ್ಲದು ಎಂದು ಡಿಎಸ್ ಓ ಡಾ.ನಾಗರತ್ನ ಹೇಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು , ಕುಂದಾಪುರ ತಾಲೂಕಿನಲ್ಲಿ 40 ಕೇಸುಗಳು ದಾಖಲಾಗಿದ್ದು, ಉಡುಪಿಯಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ಕೇಸುಗಳಿವೆ .ಕಾರ್ಕಳದಲ್ಲಿ 13 ಕೇಸು ಇದೆ.ಇಲಿ ಜ್ವರ ಬಂದಂತಹ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.
ಪಂಚಾಯತ್ ಮತ್ತು ನಗರ ವ್ಯಾಪ್ತಿಯಲ್ಲಿ ಇದರ ಬಗ್ಗೆ ಜನ ಜಾಗೃತಿ ಮೂಡಿಸುವ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಇಲಿಜ್ವರ ಪ್ರಕರಣಗಳು ಕರಾವಳಿ ಭಾಗಗಳಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.ಮಳೆಗಾಲದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಕೃತಕ ನೆರೆ ಸಂದರ್ಭ ಅಥವಾ ನೀರು ನಿಲ್ಲುವ ಸ್ಥಳಗಳಲ್ಲಿ ಇಲಿಜ್ವರದ ರೋಗಾಣುಗಳು ಹರಡಿಕೊಳ್ಳುತ್ತವೆ.
ನಿಂತ ನೀರುಗಳಲ್ಲಿ ರೋಗಾಣುಗಳು ಬಹಳ ಕಾಲದವರೆಗೆ ಇರುವುದರಿಂದ ರೋಗ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ. ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಕಿಡ್ನಿ ಮತ್ತು ಲಿವರ್ ಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
Kshetra Samachara
28/07/2022 05:47 pm