ಉಡುಪಿ: ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರ ವಹಿಸಿಕೊಂಡಿರುವುದು ಸ್ವಾಗತಾರ್ಹ ವಿಷಯ. ಆದರೆ ಈ ಹಿಂದೆ ಅಲ್ಲಿ ಖಾಸಗಿ ಸಂಸ್ಥೆ ಉತ್ತಮ ವೈದ್ಯಕೀಯ ಸೇವೆಯನ್ನು ನೀಡುತ್ತಿತ್ತು. ಮುಂದಿನ ದಿನಗಳಲ್ಲಿ ಸರಕಾರ ಕೂಡ ಅದೇ ರೀತಿಯ ಉತ್ತಮ ಸೇವೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಹೇಳಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು, ಈಗ ಇರುವ ಆಸ್ಪತ್ರೆ ಸಿಬ್ಬಂದಿ ಸ್ಥಿತಿಯೂ ಅತಂತ್ರವಾಗಿದೆ. ಇನ್ನಷ್ಟು ಸಿಬ್ಬಂದಿ ನೇಮಕದ ಪ್ರಸ್ತಾಪವನ್ನೂ ಸರಕಾರ ಮುಂದಿಟ್ಟಿದೆ. ಈಗಿರುವ ಸಿಬ್ಬಂದಿಗಳನ್ನು ಸರಕಾರ ಖಾಯಂಗೊಳಿಸಿ ಅತ್ಯುತ್ತಮ ಸೇವೆ ನೀಡಿದಾಗ ಮಾತ್ರ ಸರಕಾರದ ಈ ನಿರ್ಧಾರ ಯಶಸ್ವಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.
Kshetra Samachara
01/04/2022 05:07 pm