ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಪತ್ರಕರ್ತರಿಗೆ ಕ್ಷಯರೋಗ ಮಾಹಿತಿ ಕಾರ್ಯಾಗಾರ

ಪುತ್ತೂರು: ಪತ್ರಕರ್ತರಿಗೆ ಕ್ಷಯರೋಗ ಕುರಿತ ಮಾಹಿತಿ ಕಾರ್ಯಾಗಾರ ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕ್ಷಯ ರೋಗ ಇಲಾಖೆ ವತಿಯಿಂದ ನಡೆಯಿತು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್ ರೋಗದ ಬಗ್ಗೆ ಮಾಹಿತಿ-ಮಾರ್ಗದರ್ಶನ ನೀಡಿದರು.

"ಕ್ಷಯರೋಗವನ್ನು ದೇಶದಲ್ಲಿ ಸಂಪೂರ್ಣ ಹೋಗಲಾಡಿಸುವ ನಿಟ್ಟಿನಲ್ಲಿ 2025ರ ಗಡುವು ನಿಗದಿ ಪಡಿಸಲಾಗಿದೆ. ಕ್ಷಯರೋಗಕ್ಕೆ ತುತ್ತಾದ ವ್ಯಕ್ತಿಗೆ ಸರಕಾರದ ವತಿಯಿಂದ ಎಲ್ಲಾ ರೀತಿಯ ಸೌಲಭ್ಯ ನೀಡಲಾಗುತ್ತಿದ್ದು, ಉಚಿತ ಸೇವೆಗಳನ್ನೂ ಒದಗಿಸಲಾಗುತ್ತಿದೆ.

ಕ್ಷಯ ಹರಡುವ ಖಾಯಿಲೆಯಾಗಿದ್ದು, ಅಪೌಷ್ಟಿಕತೆ, ಬಡತನ ಹೆಚ್ಚಿರುವ ಕುಟುಂಬಗಳಲ್ಲಿ ಕ್ಷಯ ರೋಗ ಬಾಧೆ ಪ್ರಕರಣ ಹೆಚ್ಚಾಗುತ್ತಿದೆ. ಎಲ್ಲಾ ವಯೋಮಾನದವರಲ್ಲೂ ಕ್ಷಯರೋಗ ಬಾಧಿಸುವ ಸಾಧ್ಯತೆಯಿದ್ದು, ತೂಕ ಇಳಿಯುವುದು, ನಿರಂತರ ಕೆಮ್ಮು ಇತ್ಯಾದಿ ಕ್ಷಯರೋಗದ ಮುಖ್ಯ ಲಕ್ಷಣ" ಎಂದರು.

Edited By :
Kshetra Samachara

Kshetra Samachara

19/01/2022 02:39 pm

Cinque Terre

5.97 K

Cinque Terre

0

ಸಂಬಂಧಿತ ಸುದ್ದಿ