ಉಡುಪಿ: ಮಣಿಪಾಲ ವಿಕ್ಟೋರಿಯಾ ಫುಟ್‌ಬಾಲ್ ಅಕಾಡೆಮಿ ವತಿಯಿಂದ ಅಜ್ಜರಕಾಡು ಸರಕಾರಿ ಶಾಲಾ ಮೈದಾನದಲ್ಲಿ ತರಬೇತುದಾರರಾದ ಮಿಲಾನಾ, ಕ್ಲೈವ್ ಮಸ್ಕರೇನಸ್, ಇಬ್ರಾಹಿಂ ಎಂ., ಬಿಜು ಜಾಕೋಬ್ ಮಾರ್ಗದರ್ಶನದಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಖಿಲ ಭಾರತ ಫುಟ್‌ಬಾಲ್ ಪಂದ್ಯಾವಳಿ, ರಾಷ್ಟ್ರ ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಆಟಗಾರರನ್ನು ಆಯ್ಕೆ ಮಾಡಲಾಯಿತು. ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾಪು ಕಾರ್ಕಳ ತಾಲೂಕುಗಳಿಂದ 122 ಆಟಗಾರರು ಭಾಗವಹಿಸಿದ್ದು,
14 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, 16 ವರ್ಷದೊಳಗಿನ ಹುಡುಗರು, ಹುಡುಗಿಯರು ಮತ್ತು ಹಿರಿಯ ಮಹಿಳೆಯರು ಆಯ್ಕೆಯಾದರು.
14 ವರ್ಷದೊಳಗಿನ ಹುಡುಗರು 30 ವಿದ್ಯಾರ್ಥಿ ಗಳು, 16 ವರ್ಷದೊಳಗಿನ ಹುಡುಗರು 22 ವಿದ್ಯಾರ್ಥಿಗಳು, 14 ವರ್ಷದೊಳಗಿನ ಹುಡುಗಿಯರು 10, 16 ವರ್ಷದೊಳಗಿನ ಹುಡುಗಿಯರು 11, 12 ಮಂದಿ ಮಹಿಳೆಯರು ಆಯ್ಕೆಯಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ತಳಮಟ್ಟದ ಫುಟ್‌ಬಾಲ್ ಆಟದ ಅಭಿವೃದ್ಧಿ ಮತ್ತು ಮುಂದೆ ಬರಲಿರುವ 4ರಿಂದ 25 ವರ್ಷದ ವಿದ್ಯಾರ್ಥಿಗಳ ಪಂದ್ಯಾಟಕ್ಕೆ ತರಬೇತಿ ನೀಡುವಲ್ಲಿ ಅಕಾಡೆಮಿ ಕಾರ್ಯಾಚರಿಸುತ್ತಿದೆ.
Kshetra Samachara
26/10/2021 11:56 am