ಬೈಂದೂರು: ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನೀಡಲಾದ ಅಂಬುಲೆನ್ಸ್ ಹಾಗೂ ಕೆಎಸ್‌ಐಐಡಿಸಿಯಿಂದ ನೀಡಲಾದ ಮಿನಿ ಅಂಬ್ಯುಲೆನ್ಸ್‌ನ್ನು ಹಸ್ತಾಂತರ ಮಾಡಲಾಯಿತು.
ಹಿಂದುಳಿದ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅಂಬುಲೆನ್ಸ್ ನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಸಂಸದ ಬಿ. ವೈ. ರಾಘವೇಂದ್ರ, ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (ಕೆ.ಎಸ್.ಐ.ಐ.ಡಿ.ಸಿ) ನಿರ್ದೇಶಕ ಸಿ. ಆರ್. ಗಾಯತ್ರಿದೇವಿ, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ., ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ, ಕಾರ‍್ಯದರ್ಶಿ ಪ್ರಕಾಶ್ ಜಿಡ್ಡು, ಜಿಪಂ ಮಾಜಿ ಸದಸ್ಯರಾದ ಬಾಬು ಶೆಟ್ಟಿ, ಸುರೇಶ್ ಬಟವಾಡಿ, ರಾಜ್ಯ ಯೋಜನಾ ಆಯೋಗ ಮಂಡಳಿಯ ಅಧಿಕಾರೇತರ ಸದಸ್ಯೆ ಪ್ರಿಯದರ್ಶಿನಿ ಕಮಲೇಶ್ ಮೊದಲಾದವರು ಉಪಸ್ಥಿತರಿದ್ದರು
Kshetra Samachara
02/09/2021 03:13 pm