ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 10 ವರ್ಷಗಳಿಂದ ಅನ್ನಾಹಾರ ಸೇವಿಸದ ಬಾಲಕನಿಗೆ ಟಿಜೆಎಂ ಶಸ್ತ್ರಚಿಕಿತ್ಸೆ ಯಶಸ್ವಿ

ಮಂಗಳೂರು: ಬರೋಬ್ಬರಿ 10 ವರ್ಷಗಳ ಕಾಲ ಆಹಾರ ಸೇವಿಸಲು ಕಷ್ಟ ಪಡುತ್ತಿದ್ದ ಬಾಲಕನೋರ್ವ ಬರೀ ದ್ರವರೂಪದ ಆಹಾರವನ್ನಷ್ಟೇ ಸೇವಿಸುತ್ತಿದ್ದ. ಆದರೆ, ಇದೀಗ ಕೆಎಂಸಿ ವೈದ್ಯರ ತಂಡದ ಪ್ರಯತ್ನದಿಂದ ಆತ ಆಹಾರ ಸೇವಿಸೋದು ಮಾತ್ರವಲ್ಲ, ಆತನ ಮುಖದ ವಿರೂಪವನ್ನೂ ಸರಿಪಡಿಸಲು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ.

ಹೌದು! ಭಾರತದಲ್ಲೇ ಮೊದಲ ಬಾರಿಗೆ ಈ ರೀತಿಯ ಸರ್ಜರಿ ನಡೆಸಿ ಕೆಎಂಸಿ ವೈದ್ಯರ ತಂಡ ಯಶಸ್ಸು ಗಳಿಸಿದೆ. ಭಾರತೀಯ ಮೂಲದ ಬಹರೈನ್ ವಾಸಿ 10 ವರ್ಷದ ಬಾಲಕನಿಗೆ ಹುಟ್ಟಿದ ಕೇವಲ 10 ದಿನಗಳಲ್ಲೇ ಬಾಯಿ ಸಮಸ್ಯೆ ಉಂಟಾಗಿತ್ತು. ಎಂಜಲು ಕೋಶದಲ್ಲಿ ಉಂಟಾದ ಅಲರ್ಜಿಯಿಂದ ಬಾಯಿಯಲ್ಲಿ ಪ್ಯಾರೋಟಿಡ್ ಆಬ್ಸಸ್ ಸಮಸ್ಯೆ ಆರಂಭಗೊಂಡು ಬಳಿಕ ಆಂಕಿಲೋಸಿಸ್ ಆಗಿ ಬದಲಾಗಿತ್ತು.

ಪರಿಣಾಮ ಆತನ ಕೆಳದವಡೆಯಲ್ಲಿ ಬೆಳವಣಿಗೆ ಇಲ್ಲದೆ ವಿರೂಪಗೊಂಡಿತು. ಇದರಿಂದ ಆತ ಕಳೆದ ಹತ್ತು ವರ್ಷಗಳಿಂದ ಅನ್ನಾಹಾರ ಸೇವಿಸಲಾಗದೆ ಕೇವಲ ಜ್ಯೂಸ್ ಮಾದರಿಯ ಆಹಾರ ಸೇವಿಸಿ ಜೀವನ ಸಾಗಿಸಿದ್ದಾನೆ. ಅಲ್ಲದೆ, ನಿದ್ದೆ ಮಾಡುವಾಗ ಉಸಿರಾಟ ಸಮಸ್ಯೆಯೂ ಉಂಟಾಗುತ್ತಿತ್ತು.

ಈ ಮೊದಲೇ ಬಾಲಕನಿಗೆ 3 ಬಾರಿ ಸರ್ಜರಿಯಾಗಿತ್ತು. ಆದರೆ, ಪ್ರಯೋಜನವಾಗಿರಲಿಲ್ಲ. ಇದೀಗ ಕೆಎಂಸಿ ಆಸ್ಪತ್ರೆಯ ಓರಲ್ ಮತ್ತು ಮ್ಯಾಕ್ಸಿಲೋಫೆಷಿಯಲ್ ವಿಭಾಗ ತಜ್ಞ ಡಾ.ಅಭಯ್ ಕಾಮತ್ ಹಾಗೂ ವೈದ್ಯರ ತಂಡ ಭಾರತದಲ್ಲೇ ಮೊಟ್ಟ ಮೊದಲ ಪ್ರಯತ್ನದಲ್ಲಿ ಬಾಯಿ ಮತ್ತು ದವಡೆ ಜೋಡಣೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದಕ್ಕಾಗಿ ಯುಎಸ್ಎ ನಿಂದ ಬಾಯಿ - ದವಡೆ ಜೋಡಣೆ ತರಿಸಲಾಗಿತ್ತು. ಇದೀಗ ಈ ಬಾಲಕ ಎಲ್ಲಾ ತರಹದ ಆಹಾರ ಸೇವನೆಯೊಂದಿಗೆ ಎಲ್ಲರಂತೆ ಜೀವನ ನಡೆಸುತ್ತಿದ್ದಾನೆ.

Edited By : Somashekar
Kshetra Samachara

Kshetra Samachara

14/05/2022 02:29 pm

Cinque Terre

12.19 K

Cinque Terre

0

ಸಂಬಂಧಿತ ಸುದ್ದಿ