ಬ್ರಹ್ಮಾವರ: ಆಯುರ್ವೇದ ಚಿಕಿತ್ಸೆಗೆ ಭಾರತೀಯ ವೈದ್ಯ ಪರಂಪರೆಯಲ್ಲಿ ಬಹುದೊಡ್ಡ ಪ್ರಾಮುಖ್ಯತೆ, ಅಭಿಮಾನವಿದೆ. ಹಳ್ಳಿಗಳಲ್ಲಿ ಇಂದಿಗೂ ನಾಟಿ ವೈದ್ಯ ಪದ್ಧತಿ ಚಾಲ್ತಿಯಲ್ಲಿದೆ. ವೈದ್ಯ ಲೋಕಕ್ಕೆ ಸವಾಲಾದ ಅನೇಕ ಮಾರಕ ರೋಗ- ರುಜಿನಗಳು ನಾಟಿ ವೈದ್ಯರ ಚಿಕಿತ್ಸೆಯಿಂದ ಗುಣಮುಖವಾದ ಅದೆಷ್ಟೋ ಉದಾಹರಣೆ ನಮ್ಮ ಮುಂದಿದೆ.
ಹಾಗೇ ಬ್ರಹ್ಮಾವರ ಸಮೀಪದ ನೀಲಾವರ ಎಂಬಲ್ಲಿ ಒಂದು ಹಿರಿಯ ಜೀವ ಇಂದಿಗೂ ನಾಟಿ ಔಷಧಿ ಮೂಲಕ ಚಿಕಿತ್ಸೆ ನೀಡಿ ಹಲವಾರು ಜನರ ಸಹಿತ ಜಾನುವಾರುಗಳ ಜೀವವನ್ನು ರಕ್ಷಿಸಿದ್ದಾರೆ.
ಜಾಂಡೀಸ್, ಅಗ್ನಿ ಸರ್ಪ, ನರ ದೌರ್ಬಲ್ಯ, ಕಾಲುನೋವು ಇನ್ನಿತರ ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಮೂಲಕ ಹೆಸರುವಾಸಿಯಾಗಿರುವ ಸೋಮ ಪೂಜಾರಿ ಅವರ ವೈದ್ಯಕೀಯ ಸಾಧನೆಯನ್ನು ಗುರುತಿಸಿ ಇತ್ತೀಚೆಗೆ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಲಾಗಿದೆ. ಇಳಿವಯಸ್ಸಿನಲ್ಲೂ ಅನ್ಯರ ಜೀವ ಉಳಿಸುವ ಈ ಹಿರಿಯ ಚೇತನದ ಸೇವಾ ಕೈಂಕರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
Kshetra Samachara
07/05/2022 04:56 pm