ಉಡುಪಿ: ಅಜ್ಜರಕಾಡು ಪರಿಸರದಲ್ಲಿ ತನ್ನ ಗಂಡ ಹಾಗೂ ಮಕ್ಕಳನ್ನು ಅಪಹರಿಸಲಾಗಿದೆ ಎಂದು ಚೀರಾಡುತ್ತಾ ಭಯದ ವಾತಾವರಣ ಸೃಷ್ಟಿಸಿದ್ದ ಕೊಪ್ಪಳ ಮೂಲದ ಲಕ್ಷ್ಮೀ (37) ಎಂಬಾಕೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಮಹಿಳಾ ಠಾಣೆಯ ಪೊಲೀಸರ ಸಹಾಯದಿಂದ ರಕ್ಷಿಸಿ ದೊಡ್ಡಣಗುಡ್ಡೆಯ ಡಾ. ಎ.ವಿ.ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ಪತಿ ತೀರಿಕೊಂಡಿದ್ದು, ಇದರಿಂದಾಗಿ ಈಕೆ ಮಾನಸಿಕ ಅಸ್ವಸ್ಥತೆಗೆ ಒಳಗಾಗಿರುವ ಸಾಧ್ಯತೆಯಿದೆ.
ಪ್ರಕರಣದ ಬಗ್ಗೆ ಉಡುಪಿ ಸಖಿ ಸೆಂಟರ್‌ಗೆ ಮಾಹಿತಿ ನೀಡಲಾಗಿದೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ. ಮಹಿಳೆಯ ವಾರೀಸುದಾರರು ಇದ್ದಲ್ಲಿ ಉಡುಪಿ ಮಹಿಳಾ ಪೊಲೀಸ್ ಠಾಣೆ ಅಥವಾ ಬಾಳಿಗಾ ಆಸ್ಪತ್ರೆಯನ್ನು ಸಂಪರ್ಕಿಸಲು ಕೋರಲಾಗಿದೆ.
Kshetra Samachara
03/10/2022 09:48 pm