ಕುಂದಾಪುರ: ಕರಾವಳಿಯಲ್ಲಿ ಮಳೆಗಾಲ ಬಂತೆಂದರೆ ಸಾಕು, ಸಾಲು ಸಾಲು ಹಬ್ಬಗಳು. ನಾಗರ ಪಂಚಮಿಯಿಂದ ಮೊದಲು ಗೊಳ್ಳುವ ಹಬ್ಬದ ಸಡಗರ ವರ್ಷವಿಡಿ ಹಬ್ಬಗಳೇ. ಅದರಲ್ಲೂ ಶ್ರಾವಣ ಮಾಸದಲ್ಲಿ ಔಷಧೀಯ ಗುಣಗಳುಳ್ಳ ಖಾದ್ಯ ಕಷಾಯಗಳೇ ಹೆಚ್ಚು. ಹೀಗಾಗಿ ಇಂತಹ ವೈವಿಧ್ಯಮಯ ಔಷಧೀಯ ಸಸ್ಯಗಳ ಆಹಾರಕ್ರಮ ಪರಿಚಯ ಕಾರ್ಯಕ್ರಮ ಇತ್ತೀಚೆಗೆ ಕುಂದಾಪುರದಲ್ಲಿ ನಡೆಯಿತು.
ಈ ತಲೆಮಾರಿಗೆ ಮರೆತೇ ಹೋಗಿರುವ ಆಹಾರಕ್ರಮದ ಪರಿಚಯ ನೀಡುವ ಉದ್ದೇಶದಿಂದ ಕುಂದಾಪುರದ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಸಾಂಪ್ರದಾಯಿಕ ಸಸ್ಯ ಪದಾರ್ಥಗಳ ಪರಿಚಯ "ಸಸ್ಯಾಮೃತ" ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಾಂಪ್ರಾದಾಯಿಕ ಸಸ್ಯ ಪದಾರ್ಥಗಳಿಂದ ವಿವಿಧ ಆಹಾರ ಪದಾರ್ಥಗಳನ್ನು ಉಣಬಡಿಸಲಾಯಿತು. ಮುಖ್ಯವಾಗಿ ಮಳೆಗಾಲದಲ್ಲಿ ಬೆಳೆಯುವ ಕೆಸುವಿನ ಎಲೆಯ ಖಾದ್ಯ, ವಿವಿಧ ಜಾತಿಯ ಅಣಬೆ, ಹಿತ್ತಲಿನಲ್ಲಿ ಬೆಳೆಯುವ ಸೊಪ್ಪು ತರಕಾರಿಗಳಿಂದ ಮಾಡಿದ ಆಹಾರ ಪದಾರ್ಥಗಳನ್ನು ಉಣಬಡಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಯುರ್ವೇದ ವೈದ್ಯ ಡಾ.ತನ್ಮಯ್ ಗೋಸ್ವಾಮಿ ಸಸ್ಯಾಮೃತ ಆಹಾರ ಪದ್ಧತಿಯ ಬಗ್ಗೆ ಮಾಹಿತಿ ನೀಡಿ, ಆಯುರ್ವೇದ ಹಾಗೂ ಚರಕ ಸಂಹಿತೆಯಲ್ಲಿ ಆಹಾರ ಪದ್ಧತಿ ಹಾಗೂ ಸಸ್ಯಾಮೃತಗಳ ಬಗ್ಗೆ ಬಹಳಷ್ಟು ವಿಷಯಗಳನ್ನು ಹೇಳಲಾಗಿದೆ. ನಮ್ಮ ದೇಹಕ್ಕೆ ಅಗತ್ಯವಾಗಿರುವ ಸ್ನೇಹಮಯಿ ಆಹಾರ ಪದಾರ್ಥಗಳ ಬಳಕೆ ಈ ದಿನಗಳಿಗೆ ಅತ್ಯಂತ ಅಗತ್ಯವಾಗಿದೆ. ಕಲಿಯುವಿಕೆಯ ಸಿದ್ಧಾಂತಗಳು ಪ್ರಾಯೋಗಿಕವಾಗಿ ಅನುಷ್ಠಾನಗೊಂಡಾಗ ಮಾತ್ರ ವೈದ್ಯಕೀಯ ವೃತ್ತಿಗಳು ನಮಗೆ ಸಂತೃಪ್ತಿಯನ್ನು ತಂದುಕೊಡುತ್ತದೆ ಎಂದರು.
Kshetra Samachara
07/08/2022 02:03 pm