ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೀಕೆಂಡ್ ಕರ್ಫ್ಯೂ: ಕಟ್ಟುನಿಟ್ಟಿನ ಕ್ರಮ: ಉಡುಪಿ ಡಿಸಿ ಕೂರ್ಮಾ ರಾವ್

ಉಡುಪಿ: ರಾತ್ರಿಯಿಂದ ಜಾರಿಯಾಗಲಿರುವ ವಾರಾಂತ್ಯ ಕರ್ಫ್ಯೂ ಬಗ್ಗೆ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು. ತುರ್ತು ಹಾಗೂ ಅವಶ್ಯಕ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಉದ್ಯಾವನಗಳನ್ನು ಮುಚ್ಚಲಾಗುತ್ತದೆ. ಬೀದಿಬದಿ ವ್ಯಾಪಾರ, ಆಹಾರ, ದಿನಸಿ, ತರಕಾರಿ, ಹಾಲಿನ ಬೂತುಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಹೇಳಿದ್ದಾರೆ.

ಹೊಟೇಲ್‌ಗಳಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ನಿಗದಿಯಾದ ಮದುವೆಯನ್ನು ಮಾರ್ಗಸೂಚಿಯಂತೆ ನಡೆಸ ಬಹುದಾಗಿದೆ. ವಿಮಾನ, ರೈಲು ಹಾಗೂ ಸ್ಥಳೀಯ ಸಾರಿಗೆಯಲ್ಲಿ ವೈದ್ಯಕೀಯ ಹಾಗೂ ಅಗತ್ಯ ವಿಚಾರಗಳಿಗೆ ಅಂತರ್ ಜಿಲ್ಲಾ ಸಂಚರಿಸುವುದಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದರು.

ಮದುವೆಗಾಗಿ ಅಂತರ್ ಜಿಲ್ಲಾ ಸಂಚಾರ ಮಾಡುವವರು ಆಮಂತ್ರಣ ಪತ್ರಿಕೆ ತೋರಿಸಬೇಕು. ಬಸ್‌ಗಳ ಓಡಾಟ ನಿರ್ಬಂಧ ಇಲ್ಲ. ಆದರೆ ಕಡಿಮೆ ಸಂಖ್ಯೆ ಯಲ್ಲಿ ಪ್ರಯಾಣಿಕರ ಸಾಗಾಟಕ್ಕೆ ಅವಕಾಶ ನೀಡಲಾಗುತ್ತದೆ. ಕಾರ್ಮಿಕರು ತಮ್ಮ ಕೆಲಸಗಳಿಗೆ ಐಡೆಂಟಿ ಕಾರ್ಡ್ ತೋರಿಸಿ ಹೋಗಬಹುದು. ರಿಕ್ಷಾ ಟ್ಯಾಕ್ಸಿ ಓಡಾಟಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Edited By : Nagesh Gaonkar
Kshetra Samachara

Kshetra Samachara

07/01/2022 10:50 am

Cinque Terre

10.96 K

Cinque Terre

3

ಸಂಬಂಧಿತ ಸುದ್ದಿ