ಮುಲ್ಕಿ: ಸರಕಾರದ ಆದೇಶದಂತೆ ಕೊರೊನಾ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು ಭಾನುವಾರ ಮುಲ್ಕಿ ತಾಲೂಕು ಸ್ತಬ್ದಗೊಂಡಿದೆ.
ಮುಲ್ಕಿ ತಾಲೂಕು ವ್ಯಾಪ್ತಿಯ ಪೇಟೆಯಲ್ಲಿ ಭಾನುವಾರ ಬೆಳಗಿನಿಂದಲೇ ಜನಸಂಖ್ಯೆ ವಿರಳವಾಗಿದ್ದು ಜನರು ಸಂಡೆ ರಜಾ ಮೂಡಿನಲ್ಲಿದ್ದರು. ಮಧ್ಯಾಹ್ನ 2 ಗಂಟೆ ಬಳಿಕ ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದು ಮುಲ್ಕಿ ಕಿನ್ನಿಗೋಳಿ ಕಾರ್ನಾಡು ಹಳೆಯಂಗಡಿ ಪೇಟೆ ಬಿಕೋ ಎನ್ನುತ್ತಿತ್ತು.
ಮುಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗೊಮ್ಮೆ ಮಂಗಳೂರು ಉಡುಪಿ ತಡೆರಹಿತ ಬಸ್ಸುಗಳು ಸಂಚರಿಸುತ್ತಿದ್ದು ಕಿನ್ನಿಗೋಳಿ-ಕಟೀಲು ಮೂಡಬಿದ್ರೆ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ ಅನ್ಯ ಜಿಲ್ಲೆಗಳ ಸರಕಾರಿ ಬಸ್ಸುಗಳ ಓಡಾಟ ಎಂದಿನಂತೆ ಇತ್ತು.
ಮುಲ್ಕಿ ಪೊಲೀಸರು ಎಸ್ಐ ವಿನಾಯಕ ತೋರಗಲ್ ನೇತೃತ್ವದಲ್ಲಿ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಪ್ರದೇಶವಾದ ಬಪ್ಪನಾಡು ಚೆಕ್ ಪೋಸ್ಟ್ ಬಳಿ ತೀವ್ರ ನಿಗಾವಹಿಸಿ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಿದ್ದಾರೆ.
ಭಾನುವಾರ ಮುಲ್ಕಿ ನಗರ ಪಂಚಾಯತ್ ಪೌರಕಾರ್ಮಿಕರು ಮುಲ್ಕಿ ನಪಂ ಮುಖ್ಯಾಧಿಕಾರಿ ಚಂದ್ರಪೂಜಾರಿ ನಿರ್ದೇಶನದಂತೆ ಸೂಪರ್ವೈಸರ್ ಸುಂದರ ನೇತೃತ್ವದಲ್ಲಿ ಕಾರ್ನಾಡು ಬಳಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಮನಸೆಳೆದಿದ್ದಾರೆ.
ಭಾನುವಾರ ಮುಲ್ಕಿ ತಾಲೂಕಿನ ಕಾರ್ನಾಡುನಲ್ಲಿ 2, ಕೆಮ್ರಾಲ್ ಅತ್ತೂರುನಲ್ಲಿ 2, ಬಳ್ಕುಂಜೆಯಲ್ಲಿ 1 ಸೇರಿದಂತೆ ಒಟ್ಟು 5 ಪೊಸಿಟಿವ್ ಪ್ರಕರಣ ದಾಖಲಾಗಿದೆ.
Kshetra Samachara
08/08/2021 07:53 pm