ಉಡುಪಿ: ಯುವಪೀಳಿಗೆಯಲ್ಲಿ ಸೈಕಲ್ ಮೂಲಕ ದೇಶ ಯಾತ್ರೆ ಮಾಡೋದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ. ಆದರೆ ಇಲ್ಲೊಬ್ಬ ರೈತನ ಮಗ ರೈತರಿಗೆ ಬೆಂಬಲ ಮತ್ತು ಆರೋಗ್ಯಕ್ಕಾಗಿ ಕನ್ಯಾಕುಮಾರಿಯಿಂದ ಲಡಾಕ್ ಗೆ ಸೈಕಲ್ ಪ್ರಯಾಣ ಮಾಡುತ್ತಿದ್ದು, ಈ ಯುವಕ ಇದೀಗ ಉಡುಪಿ ತಲುಪಿದ್ದಾನೆ. ಆರೋಗ್ಯಕ್ಕಾಗಿ ಪೆಡಲಿಂಗ್ ಉದ್ದೇಶ ಇಟ್ಟುಕೊಂಡಿರೋ ಈತನ ಹೆಸರು ಸಂಜಯ್ ಶ್ರೀ ಕುಮಾರ್. ಕೇರಳ ಮೂಲದ ಬಡ ಕುಟುಂಬ ಹಿನ್ನಲೆಯುಳ್ಳ ದ್ವಿತೀಯ ಬಿ.ಇ ವಿದ್ಯಾರ್ಥಿ ಸಂಜಯ್ ಶ್ರೀ ಕುಮಾರ್ ಕನ್ಯಾಕುಮಾರಿಯಿಂದ ಲಡಾಕ್ ವರೆಗೆ ರೈತರಿಗೆ ಬೆಂಬಲ ಹಾಗೂ ಆರೋಗ್ಯಕ್ಕಾಗಿ ಪೆಡಲಿಂಗ್ ಧೇಯೊದ್ದೇಶದಿಂದ ಸೈಕಲ್ ಯಾತ್ರೆ ಆರಂಭಿಸಿದ್ದಾನೆ.
ಸಂಜಯ್ ಈಗಾಗಲೇ 850 ಕಿಲೋಮೀಟರ್ ಕ್ರಮಿಸಿ ಉಡುಪಿ ತಲುಪಿದ್ದಾರೆ. ಸಮಾಜಸೇವಕ ಕೃಷ್ಣಮೂರ್ತಿ ಕಿನ್ನಿಮೂಲ್ಕಿ ಮತ್ತು ಉಡುಪಿ ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಸಂಜಯ್ ರನ್ನು ಉಡುಪಿಯಲ್ಲಿ ಸಮ್ಮಾನಿಸಿ ಸೈಕಲ್ ಯಾತ್ರೆಗೆ ಶುಭ ಹಾರೈಸಿದರು.
Kshetra Samachara
12/01/2021 07:49 am