ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರಿನಿಂದ ಬೆಂಗಳೂರಿಗೆ ಕೇವಲ 4 ತಾಸಿನಲ್ಲಿ ತೆರಳಿದ ಆಂಬುಲೆನ್ಸ್: ಚಾಲಕನ ಕಾರ್ಯಕ್ಕೆ ಶ್ಲಾಘನೆ

ಪುತ್ತೂರು : ತುರ್ತಾಗಿ ಶ್ವಾಸಕೋಶ ಚಿಕಿತ್ಸೆ ಪಡೆಯಬೇಕಿದ್ದ ಯುವತಿಯನ್ನು ಆಂಬುಲೆನ್ಸ್ ಮೂಲಕ ಕೇವಲ ನಾಲ್ಕು ಗಂಟೆಗಳಲ್ಲಿ ಪುತ್ತೂರಿನಿಂದ ಬೆಂಗಳೂರು ತಲುಪಿಸಿದ್ದಾನೆ. ಆಂಬುಲೆನ್ಸ್ ಚಾಲಕನ ಈ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸುಹಾನಾ (22) ಅವರ ಶ್ವಾಸಕೋಶದಲ್ಲಿ ತುರ್ತು ಶಸ್ತ್ರಚಿಕಿತ್ಸೆ ಮಾಡಬೇಕಿದ್ದು, ಹನೀಫ್ ಆಕೆಯನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಬೆಂಗಳೂರಿನ ವೈಟ್‌ಫೀಲ್ಡ್ ನಲ್ಲಿರುವ ವೈದೇಹಿ ಆಸ್ಪತ್ರೆಗೆ ಕರೆದೊಯ್ದರು. ಉಪ್ಪಿನಂಗಡಿ-ಗುರುವಾಯನಕೆರೆ-ಚಾರ್ಮಡಿ ಘಾಟ್ ಮಾರ್ಗದಲ್ಲಿ ಪ್ರಯಾಣಿಸಿ ಒಂದೂವರೆ ಗಂಟೆಗಳಲ್ಲಿ ಮೂಡಿಗರೆ ಹ್ಯಾಂಡ್‌ಪೋಸ್ಟ್ ತಲುಪಿ ಕೇವಲ 4.05 ಗಂಟೆಗಳಲ್ಲಿ ಬೆಂಗಳೂರು ತಲುಪಿದ್ದಾರೆ.

ಸಾರ್ವಜನಿಕರು ಝೀರೋ ಟ್ರಾಫಿಕ್ ಮೂಲಕ ಆಂಬ್ಯುಲೆನ್ಸ್‌ ಸಾಗಲು ಅನುಕೂಲ ಮಾಡಿಕೊಟ್ಟರು. ಡಿಸೆಂಬರ್ 2 ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಪುತ್ತೂರಿನಿಂದ ಹೊರಟ ಆಂಬುಲೆನ್ಸ್ ಮಧ್ಯಾಹ್ನ 12.35 ಕ್ಕೆ ಮೂಡಿಗೆರೆ ಹ್ಯಾಂಡ್‌ಪೋಸ್ಟ್ ತಲುಪಿತು. ಝೀರೋ ಟ್ರಾಫಿಕ್ ಸಂಚಾರದ ವಾಟ್ಸಾಪ್ ಸಂದೇಶಗಳನ್ನು ರವಾನಿಸಲಾಗುತ್ತಿದ್ದಂತೆ, ಬಣಕಲ್, ಕೊಟ್ಟಿಗೆಹಾರ ಮುಂತಾದ ಯುವಕರ ತಂಡಗಳು ರಸ್ತೆ ಬದಿಯಲ್ಲಿ ನಿಂತು ಆಂಬುಲೆನ್ಸ್‌ಗೆ ಯಾವುದೇ ತೊಂದರೆಗಳಿಲ್ಲದೆ ಚಲಿಸುವಂತೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಬಣಕಲ್‌ನ ಸಾಮಾಜಿಕ ಕಾರ್ಯಕರ್ತ, ಮುಹಮ್ಮದ್ ಆರಿಫ್ ಮತ್ತು ಸಂಸ್ಥೆಗಳ ಸದಸ್ಯರು ಆಂಬುಲೆನ್ಸ್ ಸುಗಮವಾಗಿ ಸಾಗಲು ಸಹಾಯ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಹನೀಫ್‌, ಪ್ರತಿಯೊಂದು ಜೀವವೂ ಅಮೂಲ್ಯವಾದುದು ಮತ್ತು ಅದನ್ನು ಉಳಿಸುವುದು ಅತ್ಯಂತ ಮಾನವೀಯ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

03/12/2020 02:17 pm

Cinque Terre

32.69 K

Cinque Terre

7

ಸಂಬಂಧಿತ ಸುದ್ದಿ