ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಮೊದಲ ಹಂತದ ಕೋವಿಡ್ ಲಸಿಕೆ ಕೇಂದ್ರ ಆರಂಭ.

ಕುಂದಾಪುರ: ತಾಲೂಕಿನ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿ.ಪಂ ಮತ್ತು ಜಿಲ್ಲಾಡಳಿತದ ವತಿಯಿಂದ ಕೋವಿಡ್ ೧೯ ಲಸಿಕಾ ಕೇಂದ್ರವನ್ನು ಉಪ ಕಮೀಷನರ್ ಕೆ.ರಾಜು ಉದ್ಘಾಟಿಸಿದರು.

ತಾಲೂಕಿನಲ್ಲಿ ಮೊದಲ ಹಂತವಾಗಿ ಪ್ರಾರಂಭವಾದ ಕೋವಿಡ್ ಲಸಿಕಾ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ಆರೋಗ್ಯ ಇಲಾಖೆಯ ೨೫ ಜನರಿಗೆ ಶುಕ್ರವಾರ ಲಸಿಕೆಯ ಉಪಯೋಗದ ಅಣಕು ಪ್ರದರ್ಶನ ನೀಡಲಾಯಿತು

ಮೂರು ಹಂತಗಳನ್ನು ಮಾಡಿಕೊಂಡು ಕಾರ್ಯನಿರ್ವಹಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ. ಕಾಯುವಿಕೆ, ಇಂಜೆಕ್ಷನ್ ಹಾಗೂ ವೀಕ್ಷಣೆ ಹಂತ ಎಂದು ವಿಂಗಡಿಸಲಾಗಿದೆ.

ಮೊದಲ ಹಂತದಲ್ಲಿ ಪೋಲಿಸರು ಲಸಿಕೆ ಪಡೆಯುವವರಿಗೆ ಮೇಸೆಜ್ ಬಂದಿದೆಯಾ ಎಂದು ಪರಿಶೀಲಿಸುತ್ತಾರೆ. ನಂತರ ಆನ್ ಲೈನ್ ದಾಖಲಿಕರಿಸಿದ ನಂತರ ಇಂಜೆಕ್ಷನ್ ನೀಡಲಾಗುತ್ತದೆ. ಇಂಜೆಕ್ಷನ್ ನೀಡಿದ ನರ್ಸಿನ ಹೆಸರು ಹಾಗೂ ಪೋನ್ ಲಸಿಕೆ ಪಡೆದ ವ್ಯಕ್ತಿಯ ಮೊಬೈಲಿಗೆ ಮೇಸೆಜ್ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

ಸ್ಥಳೀಯ ವ್ಯಕ್ತಿಗಳು ಲಸಿಕೆ ಬೇಡ ಎಂದು ಹೇಳಿದರೆ ಅವರಿಗೆ ಮನವರಿಕೆ ಮಾಡಲು ಸ್ಥಳೀಯರಿಗೆ ಪರಿಚಿತ ಇರುವ ಮೂವರನ್ನು ಆಯ್ಕೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಲತಾ, ತಾ. ವೈದ್ಯಾಧಿಕಾರಿ ನಾಗಭೂಷಣ ಉಡುಪ, ವೈದ್ಯ ಡಾ| ರೋಬಾಟ್ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

09/01/2021 11:43 am

Cinque Terre

16.52 K

Cinque Terre

0

ಸಂಬಂಧಿತ ಸುದ್ದಿ