ಮಂಗಳೂರು: ಪ್ರಕೃತಿ ನೀಡಿರುವ ಸುಂದರ ಜೀವನ ಪ್ರತೀ ಹಂತಗಳಲ್ಲೂ ಬದಲಾವಣೆ ಆಗುತ್ತಲೇ ಇರುತ್ತವೆ. ಅದೇ ರೀತಿ ಫಿಸಿಯೋಥೆರಪಿ ಕ್ಷೇತ್ರ ಕೂಡ ಆಯಾಯ ಕಾಲ ಘಟ್ಟಕ್ಕೆ ಅನುಗುಣವಾಗಿ ಆಧುನಿಕ ತಂತ್ರಜ್ಞಾನ ಅಳವಡಿಸಿ ಕೌಶಲ್ಯ ಮೇಲ್ದರ್ಜೆಗೇರಿಸಿಕೊಳ್ಳುವ ಅವಶ್ಯವಿದೆ ಎಂದು ಕೇರಳ ಗವರ್ನರ್ ಆರಿಫ್ ಮೊಹಮ್ಮದ್ ಖಾನ್ ಹೇಳಿದರು.
ನಗರದ ಟಿಎಂಎ ಪೈ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಫಿಸಿಯೋಥೆರಪಿ ಬೋಧಕರ ಸಂಘ ವತಿಯಿಂದ ನಡೆದ ಮಂಗಳೂರು ಫಿಸಿಯೋಕಾನ್ 2022 ಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದು ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಅಪ್ರತಿಮ ಸಾಧನೆ ಮಾಡುತ್ತಿದ್ದಾರೆ. ಇತ್ತೀಚಿಗೆ ತಾನು ಭಾಗವಹಿಸಿರುವ ಕೇರಳದ 3 ವಿವಿ ಘಟಿಕೋತ್ಸವದಲ್ಲಿ ಚಿನ್ನದ ಪದಕ, ರ‌್ಯಾಂಕ್ ಪಡೆದವರಲ್ಲಿ ಶೇ.73ರಷ್ಟು ವಿದ್ಯಾರ್ಥಿಗಳು ಹೆಣ್ಣು ಮಕ್ಕಳೇ. ಇಂದು ಇದೇ ಸಮ್ಮೇಳದಲ್ಲಿ ಅತ್ಯಧಿಕ ಅಂಕ ಪಡೆದು ಸನ್ಮಾನಿತರಾದ ಮೂವರು ಕೂಡ ವಿದ್ಯಾರ್ಥಿನಿಯರೇ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಫಿಸಿಯೋಥೆರಪಿಸ್ಟ್‌ಗಳು ಸಮಾಜದ ಆಧುನಿಕ ಶೂಶ್ರೂಷಕರಾಗಿದ್ದು, ದೇಶದಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಫಿಸಿಯೋಥೆರಪಿಸ್ಟ್‌ಗಳ ಕೊರತೆ ಇದೆ. ಅದನ್ನು ನೀಗಿಸುವ ಪ್ರಯತ್ನ ಆಗಬೇಕಾಗಿದೆ ಎಂದು ಹೇಳಿದರು.
PublicNext
26/03/2022 09:43 am