ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪೋಷಕರಿಗೆ ಯಾವುದೇ ಭಯ ಬೇಡ: ಡಿಡಿಪಿಐ ಎಚ್ .ಎನ್ ನಾಗೂರ ಅಭಯ

ಉಡುಪಿ: ಇವತ್ತಿನಿಂದ ಪ್ರಾಥಮಿಕ ಶಾಲೆಗಳು ಆರಂಭಗೊಂಡಿದ್ದು ಪೋಷಕರು ಯಾವುದೇ ಭಯ ಆತಂಕ ಇಲ್ಲದೆ ಮಕ್ಕಳನ್ನು ಶಾಲೆಗೆ ಕಳಿಸಬೇಕು ಎಂದು ಉಡುಪಿ ಡಿಡಿಪಿಐ ಎಚ್ ಎನ್ ನಾಗೂರ ಹೇಳಿದ್ದಾರೆ.

ಒಂದು ವಾರಗಳ ಕಾಲ ಅರ್ಧ ದಿನ ತರಗತಿಗಳು ನಡೆಯುತ್ತವೆ.ಅರ್ಧ ದಿನ ಮಾಡಬೇಕು ಎಂಬುದು ರಾಜ್ಯ ಸರ್ಕಾರದ ಆದೇಶವಾಗಿದೆ.ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಸಂಸ್ಥೆಗಳು ಇದನ್ನು ಪಾಲಿಸಬೇಕು.ನವೆಂಬರ್ ಒಂದರಿಂದ ಶಾಲೆಗಳು ಪೂರ್ತಿ ದಿನ ನಡೆಯಲಿವೆ.ಪೋಷಕರು ಯಾರೂ ಆತಂಕಪಡುವ ಅಗತ್ಯ ಇಲ್ಲ.ಎರಡು ಡೋಸ್ ಆದ ಶಿಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ.ಉಡುಪಿ ಜಿಲ್ಲೆಯಲ್ಲಿ ಸರ್ವಸಿದ್ಧತೆ ಗಳು ಆಗಿವೆ.ಮಾಸ್ಕ್ ,ಸಮಾಜಿಕ ಅಂತರ, ಸ್ಯಾನಿಟೈಸ್ ವ್ಯವಸ್ಥೆ ಕಡ್ಡಾಯ ಮಾಡಲಾಗಿದೆ ಎಂದು ಉಡುಪಿ ಡಿಡಿಪಿಐ ಎಚ್ ಎನ್ ನಾಗೂರ ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

25/10/2021 12:02 pm

Cinque Terre

10.57 K

Cinque Terre

1

ಸಂಬಂಧಿತ ಸುದ್ದಿ