ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ವೈದ್ಯರಿಗಾಗಿ ಕಾನೂನು ಅರಿವು ಕಾರ್ಯಕ್ರಮ

ಮೂಡುಬಿದಿರೆ: ವೈದ್ಯ ವೃತ್ತಿಯಲ್ಲಿರುವವರು ತಮ್ಮ ವೃತ್ತಿಗೆ ಸಂಬಂಧಪಟ್ಟಂತೆ ಸಂವಿಧಾನದಲ್ಲಿ ಲಭ್ಯವಿರುವ ಕಾನೂನಿನ ಕುರಿತು ಜ್ಞಾನವನ್ನು ಹೊಂದಿರುವುದು ಅತೀ ಅಗತ್ಯ ಎಂದು ಮಣಿಪಾಲ ಮಾಹೆಯ ಸೆಂಟರ್ ಫಾರ್ ಬಿಸಿನೆಸ್ ಪ್ಯಾಕ್ಟೀಸ್‌ನ ಸಹಾಯಕ ಪ್ರಾಧ್ಯಪಕ ಡಾ ನವೀನ್ ಕುಮಾರ್ ಕೂಡಾಮರ ತಿಳಿಸಿದರು.

ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀರ್ಸ್ ಕ್ಲಬ್‌ ವತಿಯಿಂದ ಇಂಜಿನಿಯರಿಂಗ್ ಕಾಲೇಜಿನ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ವೈದ್ಯ ವೃತ್ತಿಯಲ್ಲಿರುವವರಿಗೆ ಕಾನೂನಿನ ಅರಿವು ಎಂಬ ವಿಷಯದ ಕುರಿತು ಮಾತನಾಡಿದರು.

ವೈದ್ಯ ವೃತ್ತಿಯನ್ನು ನಿರ್ವಹಿಸುವಾಗ ಹತ್ತು ಹಲವು ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಬೇಕಾಗಿ ಬರಬಹುದು. ಅಂತಹ ಸಂಧರ್ಭದಲ್ಲಿ ಸೂಕ್ತ ಕಾನೂನಿನ ಅರಿವಿದ್ದರೆ ಪರಿಸ್ಥಿತಿಯನ್ನು ನಿಭಾಹಿಸಲು ಸಾಧ್ಯ. ಅದೇ ರೀತಿ ರೋಗಿಗಳೂ ಸಹ ವೈದ್ಯರಿಂದ ಏನಾದರೂ ಸಮಸ್ಯೆಗಳಾದರೆ ಗ್ರಾಹಕ ನ್ಯಾಯಲಯದಲ್ಲಿ ದೂರನ್ನು ದಾಖಲಿಸಬಹುದು. ತುರ್ತುಚಿಕಿತ್ಸೆ ಸಂಧರ್ಭದಲ್ಲಿ ವೈದ್ಯರಾದವರು ರೋಗಿಗೆ ಚಿಕಿತ್ಸೆ ನೀಡುವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕೇ ಹೊರತು ಕಾನೂನಿನ ಔಪಚಾರಿಕತೆಗಳಿಗಲ್ಲ. ಚಿಕಿತ್ಸೆ ನೀಡಿದ ನಂತರ ಆ ವಿಷಯಗಳಿಗೆ ಗಮನ ನೀಡಬೇಕು ಎಂದು ತಿಳಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಚರ‍್ಯ ಡಾ ರೋಶನ್ ಪಿಂಟೋ, ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಪ್ರಾಚಾರ್ಯೆ ಡಾ ವನಿತಾ ಶೆಟ್ಟಿ ಉಪಸ್ಥಿತರಿದ್ದರು. ಆಳ್ವಾಸ್ ಹೋಮಿಯೋಪತಿ ಕಾಲೇಜಿನ ವಿದ್ಯಾರ್ಥಿನಿ ಶೃತಿ ಕಾರ‍್ಯಕ್ರಮ ನಿರ್ವಹಿಸಿದರು.

Edited By : Nagaraj Tulugeri
Kshetra Samachara

Kshetra Samachara

26/05/2022 08:45 pm

Cinque Terre

4.82 K

Cinque Terre

0

ಸಂಬಂಧಿತ ಸುದ್ದಿ