ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ನಗರ ಪಂಚಾಯತ್ ವ್ಯಾಪ್ತಿಯ ಪ್ರತಿ ಮನೆಯಲ್ಲೂ ಕೋವಿಡ್ ಟೆಸ್ಟ್ ನಡೆಯಲಿ"

ಮುಲ್ಕಿ: ಮುಲ್ಕಿ ನಗರ ಪಂಚಾಯತಿ, ಸಮುದಾಯ ಆರೋಗ್ಯ ಕೇಂದ್ರ,ಕೆಮ್ರಾಲ್-ಅತ್ತೂರು ಪ್ರಾ. ಆ. ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಕೋವಿಡ್ ಶಿಬಿರದ ಪೂರ್ವಭಾವಿ ಸಭೆ ಮುಲ್ಕಿ ಸಮುದಾಯ ಭವನದಲ್ಲಿ ನಡೆಯಿತು. ಮುಲ್ಕಿ ನಪಂ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮಾತನಾಡಿ, ಮುಲ್ಕಿ ನಪಂ ವ್ಯಾಪ್ತಿಯಲ್ಲಿ ಕೊರೊನಾ ಜಾಸ್ತಿಯಾಗುತ್ತಿರುವುದು ಕಳವಳಕಾರಿ ಎಂದು ಆತಂಕ ವ್ಯಕ್ತಪಡಿಸಿ ಅ.5 ರಂದು ಮುಲ್ಕಿ ನಪಂ ವ್ಯಾಪ್ತಿಯ ಲಿಂಗಪ್ಪಯ್ಯಕಾಡು ಸಭಾಭವನದಲ್ಲಿ ಕೋವಿಡ್ -19 ಪರೀಕ್ಷಾ ಶಿಬಿರ ಆಯೋಜಿಸಿದ್ದು ಎಲ್ಲರ ಸಹಕಾರ ಅಗತ್ಯ ಎಂದರು.

ಮುಲ್ಕಿ ವಿಶೇಷ ತಹಶೀಲ್ದಾರ್ ಮಾಣಿಕ್ಯ ಎನ್ .ಮಾತನಾಡಿ, ಮುಲ್ಕಿ ಹೋಬಳಿಯಲ್ಲಿ ಇದುವರೆಗೆ 474 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 382 ಮಂದಿ ಗುಣಮುಖರಾಗಿದ್ದಾರೆ. 84 ಮಂದಿ ಚಿಕಿತ್ಸೆಯಲ್ಲಿದ್ದಾರೆ. 21 ಮಂದಿ ಸಾವನ್ನಪ್ಪಿದ್ದಾರೆ ಎಂದರು.

ವೈದ್ಯಾಧಿಕಾರಿ ಸುನಿಲ್ ಜತ್ತನ್ನ ಮಾತನಾಡಿ, ಶಿಬಿರಕ್ಕೆ ಆದಷ್ಟು ನಾಗರಿಕರು ಆಗಮಿಸಿ ಕೋವಿಡ್ ಟೆಸ್ಟ್ ನಡೆಸಿ ಯಶಸ್ವಿಗೊಳಿಸಲು ಮನವಿ ಮಾಡಿದರು.

ಮುಲ್ಕಿ ನಪಂ ವ್ಯಾಪ್ತಿಯ ವೈದ್ಯರು ಜ್ವರಕ್ಕೆ ಬರುವ ರೋಗಿಗಳಿಗೆ ಔಷಧಿ ಕೊಡುತ್ತಿದ್ದು, ಕೊರೊನಾ ಹರಡುವಿಕೆಗೆ ಕಾರಣವಾಗಿದೆ ಎಂಬ ಆರೋಪಗಳು ಕೇಳಿ ಬಂತು. ಮುಲ್ಕಿಯ ವೈದ್ಯ ಅಚ್ಯುತ್ ಕುಡ್ವ ಮಾತನಾಡಿ, ಕೊರೋನಾ ನಿಯಂತ್ರಣಕ್ಕೆ ಮಾಸ್ಕ್ ಬಳಸುವುದನ್ನು ಕಡ್ಡಾಯ ಮಾಡಬೇಕು. ಇಲ್ಲದಿದ್ದರೆ ದಂಡ ವಿಧಿಸಲು ಹಿಂಜರಿಯಬಾರದು, ಇದಕ್ಕೆ ಪೊಲೀಸರು ಸಹಕಾರ ನೀಡಬೇಕು ಎಂದರು.

ಮುಲ್ಕಿ ಲಯನ್ಸ್ ಮಾಜಿ ಅಧ್ಯಕ್ಷ ವೆಂಕಟೇಶ ಹೆಬ್ಬಾರ್ ಮಾತನಾಡಿ, ಮುಲ್ಕಿ ವ್ಯಾಪ್ತಿಯ ಪ್ರತಿ ಮನೆಯಲ್ಲೂ ಕೋವಿಡ್ ಟೆಸ್ಟ್ ನಡೆಸಿದರೆ ಕೊರೊನಾ ವಿರುದ್ಧ ಹೋರಾಡಲು ಸಾಧ್ಯ ಎಂದರು.

ವೈದ್ಯಾಧಿಕಾರಿ ಡಾ.ಕೃಷ್ಣ ಮಾತನಾಡಿ, ಮುಲ್ಕಿ ನಗರ ವ್ಯಾಪ್ತಿಯಲ್ಲಿ ಕೋವಿಡ್ ಆರಂಭಗೊಂಡಂದಿನಿಂದ ಈವರೆಗೆ 708 ಆರ್ಟಿಪಿಸಿಆರ್ ಪರೀಕ್ಷೆ ನಡೆಸಿದ್ದು 93 ಪಾಸಿಟಿವ್ ದಾಖಲಾಗಿದೆ. 425 ಮಂದಿ ರಾಪಿಡ್ ಪರೀಕ್ಷೆ ನಡೆಸಿದ್ದು ಅಲ್ಲೂ 93 ಪಾಸಿಟಿವ್ ಪತ್ತೆಯಾಗಿದೆ. ಇದೀಗ ಶಿಬಿರಗಳ ಮೂಲಕ ಕೋವಿಡ್ ಪರೀಕ್ಷೆ ಆಯೋಜಿಸಿದ್ದು, ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು. ಐಎಎಸ್ ಪರೀಕ್ಷಾರ್ಥ ಅಧಿಕಾರಿ ಮೋನಾರೋಟ್, ಎಎಸ್ಐ ಸುರೇಶ್ ಕುಂದರ್,ಮುಲ್ಕಿ ನಪಂ ಸದಸ್ಯರು ಉಪಸ್ಥಿತರಿದ್ದರು.

ಮುಲ್ಕಿ ನಪಂ ಮುಖ್ಯಾಧಿಕಾರಿ ಪಿ.ಚಂದ್ರ ಪೂಜಾರಿ ಸ್ವಾಗತಿಸಿ, ವಂದಿಸಿದರು.

Edited By : Nagesh Gaonkar
Kshetra Samachara

Kshetra Samachara

01/10/2020 06:36 pm

Cinque Terre

46.65 K

Cinque Terre

1

ಸಂಬಂಧಿತ ಸುದ್ದಿ