ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ಗ್ರಾಮ ಪಂಚಾಯತಿನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಸರಳ ರೀತಿಯಲ್ಲಿ ನಡೆಯಿತು.
ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ ಮಾತನಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ಸಂಕಷ್ಟದ ಸಮಯದಲ್ಲಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ ನೆಲೆಯಲ್ಲಿ ಕೊರೋನಾ ವಾರಿಯರ್ಸ್ ಗೆ ಗೌರವ ಕಾರ್ಯಕ್ರಮ ನಡೆದಿದ್ದು ಪಂಚಾಯಿತಿ ಅಭಿವೃದ್ಧಿಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು
ಪಂಚಾಯತ್ ಸದಸ್ಯರಾದ ದಮಯಂತಿ,ವಿಕಾಸ್ ಶೆಟ್ಟಿ, ರಾಜೇಶ್ ಕೋಟ್ಯಾನ್,ಮಮತಾ ಶೆಟ್ಟಿ,ಶಾಂತಾ,ಲಲಿತಾ ಯಾದವ್ ಮತ್ತಿತರರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಕೊರೋನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಾದ ಮಂಜುಳಾ, ಸುಪ್ರಭಾ, ಶಶಿಕಲಾ ಅಂಗನವಾಡಿ ಕಾರ್ಯಕರ್ತೆಯಾದ ಜಲಜಾ, ಜಯಶ್ರೀ, ಆರೋಗ್ಯ ಕಾರ್ಯಕರ್ತೆಯರಾದ ಸುಮಾ, ಸ್ವಯಂ ಸೇವಕರಾದ ಭಾಸ್ಕರ ಶೆಟ್ಟಿಗಾರ್, ಕೇಶವ ಜೆ ಸುವರ್ಣ, ಪ್ರಸಾದ್ ಜಿ ಕುಂದರ್, ಲಕ್ಷಣ ಪೂಜಾರಿ ಅಬ್ದುಲ್ ಶರೀಫ್, ಹರ್ಷ.ಬಿ ಹಾಗೂ ಪಂಚಾಯತ್ ಸುರೇಶ್, ರಮೇಶ ಬಂಗೇರ, ತಾರಾನಾಥ್ ಶೆಟ್ಟಿಗಾರ್ ರವರನ್ನು ಗೌರವಿಸಲಾಯಿತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಸ್ವಾಗತಿಸಿದರು. ರಮೇಶ್ ಬಂಗೇರ ಧನ್ಯವಾದ ಅರ್ಪಿಸಿದರು.
Kshetra Samachara
15/08/2021 09:18 pm