ಬಜಪೆ: ವ್ಯಾಕ್ಸಿನೇಶನ್ ಹೆಸರಿನಲ್ಲಿ ವಂಚನೆ ಜಾಲವೊಂದು ಸಕ್ರಿಯವಾಗಿದ್ದು, ಜನರು ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಸ್ವರಕ್ಷಾ ಫಾರ್ ವಿಮೆನ್ ಟ್ರಸ್ಟ್ ಸಂಸ್ಥಾಪಕ ಕಾರ್ತಿಕ್ ಎಸ್. ಕಟೀಲ್ ಎಚ್ಚರಿಸಿದ್ದಾರೆ.
"ನಾವು ವ್ಯಾಕ್ಸಿನೇಶನ್ ಸೆಂಟರ್ ನಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಎರಡೂ ಡೋಸ್ ಕಂಪ್ಲೀಟ್ ಆಗಿದೆಯೇ?" ಎಂದು ಜನರಿಗೆ ಕರೆ ಬರುತ್ತದೆ. ಜನ ಎರಡೂ ಡೋಸ್ ಕಂಪ್ಲೀಟ್ ಆಗಿದೆ ಎಂದರೆ, ನೀವು ಬೂಸ್ಟರ್ ಡೋಸ್ ಗೆ ರಿಜಿಸ್ಟ್ರೇಷನ್ ಮಾಡಬೇಕು. ನಿಮ್ಮ ಅಧಾರ್ ನಂಬರ್ ಕೊಡಿ. ನಂತರ ಒಟಿಪಿ ಕೂಡ ಕೇಳುತ್ತಾರೆ. ಒಂದು ವೇಳೆ ನಾವು ಒಟಿಪಿ ನಂಬರ್ ಕೊಟ್ಟಲ್ಲಿ ನಮ್ಮ ಬ್ಯಾಂಕ್ ಖಾತೆಯ ಎಲ್ಲ ಹಣ ದೋಚುತ್ತಾರೆ. ಇದೊಂದು ದೊಡ್ಡ ಮಹಾಮೋಸದ ಜಾಲವೇ ಆಗಿದ್ದು, ಎಲ್ಲರೂ ಎಚ್ಚರವಾಗಿರಿ ಎಂದು ಕಿವಿಮಾತು ಹೇಳಿದ್ದಾರೆ.
Kshetra Samachara
02/02/2022 09:05 pm