ಉಡುಪಿ: ನಿನ್ನೆ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಬಂದ ಒಟ್ಟು 1018 ಸೋಂಕಿತರ ಪೈಕಿ 667 ಮಂದಿ ಐದು ವರ್ಷದೊಳಗಿನ ಮಕ್ಕಳು ಸೇರಿದಂತೆ 25 ವರ್ಷದೊಳಗಿನವರು ಸೇರಿದ್ದಾರೆ. ಜಿಲ್ಲೆಯಲ್ಲಿ ಕಳೆದ ಜನವರಿ ಒಂದರಿಂದ ಇಂದಿನವರೆಗೆ ಒಟ್ಟು 7738 ಮಂದಿಗೆ ಪಾಸಿಟಿವ್ ಬಂದಿದ್ದು, ಇವರಲ್ಲಿ 4150 ಮಂದಿ 0-25 ವರ್ಷ ವಯೋವರ್ಗಕ್ಕೆ ಸೇರಿದವರು ಎಂದು ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ.
ನಿನ್ನೆ ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಐವರು ಮಕ್ಕಳು ಕೊರೋನಕ್ಕೆ ಪಾಸಿಟಿವ್ ಬಂದಿದ್ದರೆ, 6ರಿಂದ 10 ವರ್ಷದೊಳಗಿನ 55, 11ರಿಂದ 15 ವರ್ಷದೊಳಗಿನ 228, 16ರಿಂದ 20ವರ್ಷದೊಳಗಿನ 279 ಹಾಗೂ 20ರಿಂದ 25ವರ್ಷದೊಳಗಿನ 100 ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ.
Kshetra Samachara
22/01/2022 11:31 am