ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೋವಿಡ್ ನ ಮೂರನೇ ಅಲೆ ಎದುರಿಸಲು ದ.ಕ.ಜಿಲ್ಲಾಡಳಿತ ಸರ್ವ ಸನ್ನದ್ಧ

ಮಂಗಳೂರು: ದ.ಕ.ಜಿಲ್ಲಾಡಳಿತ ಕೋವಿಡ್ ನ ಮೂರನೇ ಅಲೆಯನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ ಎಂದು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ‌.ಸದಾಶಿವ ಶಾನುಭಾಗ್ ಹೇಳಿದರು.

ವೆನ್ಲಾಕ್ ಆಸ್ಪತ್ರೆಯಲ್ಲಿ 905 ಬೆಡ್ ಗಳ ವ್ಯವಸ್ಥೆಯಿದ್ದು, 480 ಬೆಡ್ ಗಳಿಗೆ ಸೆಂಟ್ರಲ್ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಲಾಗಿದೆ. ಈಗಾಗಲೇ 3 ಆಕ್ಸಿಜನ್ ಪ್ಲ್ಯಾಂಟ್ ಗಳು ಕಾರ್ಯಚರಣೆ ಮಾಡುತ್ತಿದ್ದು 12 ಕೆಎಲ್ ಬಿ ಸಾಮಥ್ಯವುಳ್ಳ ಲಿಕ್ವಿಡ್ ಮೆಡಿಕಲ್‌ ಆಕ್ಸಿಜನ್ ಸ್ಟೋರೇಜ್ ಟ್ಯಾಂಕ್ ವ್ಯವಸ್ಥೆಯನ್ನು ಮಾಡಲಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗುವ ಸಾಧ್ಯತೆಯಿಲ್ಲ.

ಅದೇ ರೀತಿ 30-35 ಮೆಡಿಕಲ್ ಐಸಿಯು ಬೆಡ್ ಇದ್ದು, 30 ಬೆಡ್ ಗಳ ಮಕ್ಕಳ ಐಸಿಯುವನ್ನು ಸಜ್ಜುಗೊಳಿಸಲಾಗಿದೆ. ಅಲ್ಲದೆ 2 ಸುಸಜ್ಜಿತ ಐಸಿಯು, 20 ಬೆಡ್ ಗಳ ಸರ್ಜಿಕಲ್ ಮತ್ತು ಎಮರ್ಜೆನ್ಸಿ ಐಸಿಯು ವ್ಯವಸ್ಥೆಯಿದೆ. ಆದ್ದರಿಂದ ಯಾರೂ ಭೀತಿಗೊಳಗಾಗುವ ಅವಶ್ಯಕತೆಯಿಲ್ಲವೆಂದು ಡಾ.ಸದಾಶಿವ ಶಾನುಭಾಗ್ ಹೇಳಿದರು.

Edited By : Manjunath H D
Kshetra Samachara

Kshetra Samachara

06/01/2022 02:07 pm

Cinque Terre

13.74 K

Cinque Terre

2

ಸಂಬಂಧಿತ ಸುದ್ದಿ