ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇರಳದಲ್ಲಿ ನ್ಯೂರೋ ವೈರಸ್ ಪತ್ತೆ: ಕರಾವಳಿಯಲ್ಲಿ ಕಟ್ಟೆಚ್ಚರ

ಮಂಗಳೂರು: ಕೇರಳದ ವಯನಾಡ್ ಕಾಲೇಜೊಂದರಲ್ಲಿ ಕೆಲ ದಿನಗಳ ಹಿಂದೆ ನ್ಯೂರೋ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗಡಿ ಪ್ರದೇಶ ದ.ಕ., ಕೊಡಗು ಜಿಲ್ಲೆಗಳಲ್ಲಿ ನಿಗಾ ವಹಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಸೂಚನೆ ಹೊರಡಿಸಿದೆ.

ಸರಕಾರದ ಈ ಸೂಚನೆಯಲ್ಲಿ ನ್ಯೂರೊ ಸೋಂಕು ಪ್ರಕರಣ ನೋಡಿಕೊಳ್ಳಲು ವೈದ್ಯರೋರ್ವರನ್ನು ನೋಡೆಲ್ ಅಧಿಕಾರಿಯಾಗಿ ನೇಮಕ ಮಾಡುವಂತೆ ತಿಳಿಸಲಾಗಿದೆ. ನ್ಯೂರೊ ಸೋಂಕು ಪತ್ತೆಯಾಗಲಿ ಆಗದಿರಲಿ‌ ಈ ಕುರಿತ ವರದಿಯನ್ನು ದಿನನಿತ್ಯ ಆರೋಗ್ಯ ಇಲಾಖೆಗೆ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ.

ಭೇದಿ, ಹೊಟ್ಟೆನೋವು, ವಾಂತಿ, ಜ್ವರ ನ್ಯೂರೋ ವೈರಸ್ ಸೋಂಕು ಲಕ್ಷಣವಾಗಿದೆ. ಇಂತಹ ಲಕ್ಷಣಗಳು ಗುಂಪಾಗಿ ಕಂಡು ಬಂದರೆ ತಕ್ಷಣ ಮಾಹಿತಿ ರವಾನಿಸುವಂತೆ ಜಿಲ್ಲೆಯ ಎಲ್ಲ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸುತ್ತೋಲೆ ರವಾನಿಸಲಾಗಿದೆ.

ಸೋಂಕಿತ ವ್ಯಕ್ತಿಯ ಆಹಾರ, ನೀರು, ಇತರ ಸಂಪರ್ಕಗಳಿಂದ ಸೋಂಕು ಹರಡುವುದರಿಂದ ಜಿಲ್ಲೆಯ ನೀರು ಕಲುಷಿತವಾಗದಂತೆ ಫ್ಲೋರಿನೇಶನ್ ಪ್ರಕ್ರಿಯೆ ಕೈಗೊಳ್ಳಲು ಆರೋಗ್ಯ ಇಲಾಖೆ‌ ಮುಂದಾಗಿದೆ.

Edited By : Nagaraj Tulugeri
Kshetra Samachara

Kshetra Samachara

27/11/2021 08:23 pm

Cinque Terre

17.34 K

Cinque Terre

0

ಸಂಬಂಧಿತ ಸುದ್ದಿ