ಉಡುಪಿ: ನಾಲ್ಕು ತಿಂಗಳಿಂದ ಸಂಬಳ ನೀಡದೇ ಸತಾಯಿಸುತ್ತಿರುವ ಖಾಸಗಿ ಏಜೆನ್ಸಿ ವಿರುದ್ಧ ಇಂದು
ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಆಸ್ಪತ್ರೆಯ ಹೌಸ್ ಕೀಪಿಂಗ್ ಸಿಬ್ಬಂದಿಯಿಂದ ಪ್ರತಿಭಟನೆ ನಡೆಯಿತು.
30ಕ್ಕೂ ಹೆಚ್ಚು ಹೌಸ್ ಕೀಪಿಂಗ್ ಸಿಬ್ಬಂದಿ ಕೆಲಸ ಮಾಡದೆ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪಿಎಂಎಸ್ ಎಂಬ ಏಜೆನ್ಸಿ ಮೂಲಕ ಹೌಸ್ ಕೀಪಿಂಗ್ ಸಿಬ್ಬಂದಿಯಾಗಿ ಇವರನ್ನು ನೇಮಿಸಿಕೊಳ್ಳಲಾಗಿತ್ತು. ಸದ್ಯ ನಾಲ್ಕು ತಿಂಗಳಿಂದ ಬೆಂಗಳೂರು ಮೂಲದ ಪಿಎಂ ಎಸ್ ಏಜೆನ್ಸಿ ಇವರ ಸಂಬಳ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಇಂದು ನೌಕರರ ತಾಳ್ಮೆಯ ಕಟ್ಟೆ ಒಡೆದು ಪ್ರತಿಭಟಿಸಿದರು.
ಆಸ್ಪತ್ರೆಯವರನ್ನು ಕೇಳಿದರೆ ಏಜೆನ್ಸಿ ಅವರನ್ನು ಕೇಳಿ ಎಂಬ ಹಾರಿಕೆಯ ಉತ್ತರ ಬರುತ್ತಿದೆ. ಸಂಬಳ ನೀಡದೇ ಇದ್ದರೆ ನಾವು ಕೆಲಸ ಮಾಡುವುದಿಲ್ಲ ಎಂದು ಹೌಸ್ ಕೀಪಿಂಗ್ ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ.
Kshetra Samachara
16/12/2020 05:27 pm