ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೃಹರಕ್ಷಕ ದಳದ ವತಿಯಿಂದ ಕಾಪು ಪೇಟೆಯಲ್ಲಿ ಕೋವಿಡ್ ಜಾಗೃತಿ

ಕಾಪು: ಉಡುಪಿ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಕಾಪು ಪೇಟೆಯಲ್ಲಿ ಕೋವಿಡ್ ಜಾಗೃತಿ ಜಾಥವನ್ನು ಕಾಪು ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್ ಉದ್ಘಾಟಿಸಿದರು.

ಜಾಥವು ಕಾಪು ವೃತ್ತ ನಿರೀಕ್ಷಕರ ಕಛೇರಿಯಿಂದ ಕಾಪು ಪೋಲಿಸ್ ಠಾಣೆಯವರೆಗೆ ಸಾಗಿ ಬಂತು. ಗೃಹ ರಕ್ಷಕದಳ ಸಿಬ್ಬಂದಿಗಳು ಶಿಸ್ತಿನ ಸಿಪಾಯಿಗಳಂತೆ ಜಾಥಾದಲ್ಲಿ ಭಾಗಿಯಾದರು. ಕೊರಾನಾ ಇನ್ನೂ ಮುಗಿದಿಲ್ಲ. ನಾವು ಮಾಸ್ಕ್ ಧರಿಸುವ ಮೂಲಕ ,ಸಾಮಾಜಿಕ ಅಂತರ ಕಾಪಾಡುವ ಮೂಲಕ ಕೊರೊನಾವನ್ನು ಹೋಗಲಾಡಿಸೋಣ ಮೊದಲಾದ ಘೋಷಣಾ ಫಲಕಗಳನ್ನು ಜಾಥದಲ್ಲಿ ಪ್ರದರ್ಶಿಸಲಾಯಿತು.

ರಸ್ತೆಯಲ್ಲಿ ಜಾಥ ಸಾಗುತ್ತಿದ್ದ ಸಂದರ್ಭ ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದವರಿಗೆ ಮಾಸ್ಕ್ ನ್ನು ವಿತರಿಸಲಾಯಿತು.

ಈ ಸಂದರ್ಭಜಿಲ್ಲಾ ಗೃಹ ರಕ್ಷದ ದಳದ ಮುಖ್ಯಧಿಕಾರಿ ಡಾ. ಪ್ರಶಾಂತ್ ಶೆಟ್ಟಿ, ದಳದ ಮುಖ್ಯಸ್ಥ ಲಕ್ಷ್ಮೀ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

28/11/2020 02:41 pm

Cinque Terre

20.63 K

Cinque Terre

1

ಸಂಬಂಧಿತ ಸುದ್ದಿ