ಮಂಗಳೂರು: ಕೊರೊನಾ ಮಹಾಮಾರಿ ವಿಶ್ವಕ್ಕೆ ವ್ಯಾಪಿಸಿದ ಬಳಿಕ ಅದೆಷ್ಟೋ ಉದ್ಯಮಗಳು ನೆಲಕಚ್ಚಿ ಹೋಗಿವೆ. ಅನ್ಲಾಕ್ ಪ್ರಕ್ರಿಯೆ ಆರಂಭವಾದ ಬಳಿಕ ಕೆಲ ಉದ್ಯಮಗಳು ಚೇತರಿಸಿಕೊಂಡಿದ್ರೂ ಸಿಗರೇಟ್ ಮಾತ್ರ ಹೂಡಿಕೆದಾರರ ಜೇಬನ್ನ ಸುಡುತ್ತಿದೆ.
ಕಾಫಿ ಜೊತೆಗೊಂದು ಸಿಗರೇಟ್ ಅಂತಿದ್ದ ಜನರ ಜೀವನ ಶೈಲಿ ಕೊರೊನಾ ಬಳಿಕ ಬದಲಾಗಿ ಹೋಗಿದೆ. ಹೀಗಾಗಿ ಈ ವರ್ಷ ಸಿಗರೇಟ್ ಬ್ಯುಸಿನೆಸ್ ಶೇಕಡಾ 50ಕ್ಕಿಂತ ಮೇಲೇರಿಲ್ಲ. ಇದರ ಜೊತೆಗೆ ಕೊರೊನಾ ಮಹಾಮಾರಿ ಶ್ವಾಸಕೋಶಕ್ಕೆ ನೇರ ಪರಿಣಾಮ ಬೀರೋದರಿಂದ ವೈದ್ಯರು ಧೂಮಪಾನ ಮಾಡದಂತೆ ಕಿವಿಮಾತು ಹೇಳಿದ್ದಾರೆ. ಹೀಗಾಗಿ ಅದೆಷ್ಟೋ 'ಚೈನ್ ಸ್ಮೋಕರ್ಸ್' ಸಿಗರೇಟ್ ಎಳೆಯೋದನ್ನೇ ಬಿಟ್ಬಿಟ್ಟಿದ್ದಾರಂತೆ.
ಅಲ್ಲದೇ ಲಾಕ್ಡೌನ್ ಟೈಂನಲ್ಲಿ ಕಾರ್ಮಿಕರ ವಲಸೆ ಕೂಡ ಸಿಗರೇಟ್ ಉದ್ಯಮದ ಮೇಲೆ ಭಾರೀ ಏಟು ನೀಡಿದೆ. ಇದರ ಜೊತೆಗೆ ಕೊರೊನಾ ಕಾರಣದಿಂದ ಹೆಚ್ಚಿನ ಮಂದಿ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದು ಪ್ಯಾಕ್ ಪ್ಯಾಕ್ ಸಿಗರೇಟು ಸೇದುವವರ ಸಂಖ್ಯೆ ಕಡಿಮೆಯಾಗಿದೆ. ಒಟ್ಟಿನಲ್ಲಿ ಧೂಮಪಾನಿಗಳು 'ನೋ ಸ್ಮೋಕಿಂಗ್' ಅನ್ನುತ್ತಿರುವುದು, ಅವರನ್ನೇ ನಂಬಿ ಕೂತ ಅಂಗಡಿ ಮಾಲಕರಿಗೆ ಮಾತ್ರ ಕಹಿ ಅನುಭವ ಆಗುವಂತೆ ಮಾಡಿದೆ.
Kshetra Samachara
10/11/2020 08:41 pm