ಉಡುಪಿ: ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಜನರ,ಜನಪ್ರತಿನಿಧಿಗಳ ಭಾವನೆ ಅರಿತು ಅದರಂತೆ ಕೆಲಸ ಮಾಡುತ್ತೇನೆ ಎಂದು ಉಡುಪಿಯ ನೂತನ ಡಿ.ಸಿ ಕೂರ್ಮ ರಾವ್ ಎಂ ಹೇಳಿದ್ದಾರೆ.ಇವತ್ತು ಸರಕಾರಿ ಬಾಲಕಿಯರ ಶಾಲೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು,ಇವತ್ತಿನಿಂದ ಶಾಲಾರಂಭವಾಗಿದೆ.ಮಕ್ಕಳ ಜೊತೆ ಮಾತನಾಡಿದ್ದೇನೆ.ಮುಂದಿನ ದಿನಗಳಲ್ಲಿ ಪಾಸಿಟಿವಿಟಿ ದರ ಮತ್ತಿತರ ಅಂಶಗಳನ್ನು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ವೀಕೆಂಡ್ ಕರ್ಪ್ಯೂ ನ ಅಗತ್ಯ ಜಿಲ್ಲೆಯಲ್ಲಿಲ್ಲ ಎಂಬ ಶಾಸಕರ ಹೇಳಿಕೆ ಬಗ್ಗೆ ಗಮನ ಸೆಳೆದಾಗ,ಅದರ ಬಗ್ಗೆ ಇನ್ನಷ್ಟೇ ಚರ್ಚೆ ನಡೆಸಬೇಕಿದೆ.ಎಲ್ಲರೂ ಕುಳಿತು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಜನರ ,ಜನಪ್ರತಿನಿಧಿಗಳ ಭಾವನೆ ಅರಿತುಕೊಳ್ಳಬೇಕಿದೆ.ನಂತರ ಅದ್ಯತೆಯ ಮೇಲೆ ಕೆಲಸ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
Kshetra Samachara
01/09/2021 02:13 pm